Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಎನ್. ಶಶಿ ಕುಮಾರ್ ಫುಲ್ ಆಕ್ಟಿವ್ ಆಗಿದ್ದಾರೆ. ಅಧಿಕಾರ ವಹಿಸಿಕೊಂಡ ದಿನವೇ ಮಧ್ಯರಾತ್ರಿ ಅವಳಿ ನಗರದ ವಿವಿಧ ಠಾಣೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಯ ವೈಖರಿಯನ್ನು ವೀಕ್ಷಣೆ ಮಾಡಿದ್ದರು.
ಅದೇ ರೀತಿ ಇಂದು ಬೆಳಗ್ಗೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿನ ಹೊಸ ಸಿಆರ್ ಮೈದಾನದಲ್ಲಿ ಕಮಿಷನರ್ ಶಶಿ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು. ಅವಳಿ ನಗರದ ಪೊಲೀಸ್ ಸಿಬ್ಬಂದಿ ಪರೇಡ್ ನಲ್ಲಿ ಭಾಗಿಯಾಗಿ ಕವಾಯತ್ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಎಲ್ಲ ವಾಹನಗಳ ದಾಖಲೆಗಳನ್ನು ಹಾಗೂ ವಾಹನದ ಪರಿಸ್ಥಿತಿಯನ್ನು ಖುದ್ದು ಕಮಿಷನರ್ ವೀಕ್ಷಣೆ ಮಾಡಿ ವಾಹನದ ಚಾಲಕರಿಂದ ಮಾಹಿತಿ ಪಡೆದರು. ಪೊಲೀಸ್ ಇಲಾಖೆಯ ಎಲ್ಲ ವಾಹನಗಳ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಅಂತಾ ಸಿಬ್ಬಂದಿಗೆ ಸೂಚನೆ ನೀಡಿದರು.
PSI ಗಳಿಗೆ ಬಂದ ಹೊಸ ಅಪಾಚೆ ಬೈಕ್ ನೋಡಿ ಮಹಿಳಾ PSI ಕೈಯಲ್ಲಿ ಬೈಕ್ ಚಾಲನೆ ಮಾಡಿಸಿ ಮಹಿಳಾ ಸಿಬ್ಬಂದಿಗೆ ಆತ್ಮಸ್ಥೆರ್ಯ ತುಂಬಿದರು. ಇಲಾಖೆಯ ಸಿಬ್ಬಂದಿಗೆ ಏನಾದ್ರೂ ಸಮಸ್ಯೆಗಳು ಹಾಗೂ ಕುಂದುಕೊರತೆಗಳು ಇದ್ದರೆ ಹೇಳಿ. ಅವುಗಳನ್ನು ಇತ್ಯರ್ಥಪಡಿಸುವ ಕಾರ್ಯವನ್ನು ಮಾಡುತ್ತೇನೆ ಅಂತಾ ಪೊಲೀಸ್ ಸಿಬ್ಬಂದಿಗೆ ನೈತಿಕ ಧೈರ್ಯ ತುಂಬಿದರು.