ಟೀಂ ಇಂಡಿಯಾ 17ವರ್ಷಗಳ ಬಳಿಕ ಟಿ-20 ವಿಶ್ವಕಪ್ ಗೆದ್ದು ಬೀಗಿದೆ. ಬಾರ್ಬಾಡೋಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ ಫೈಟ್ ನಲ್ಲಿ ದ.ಆಫ್ರಿಕಾ ತಂಡವನ್ನು ಸೋಲಿಸುವುದರ ಮೂಲಕ ಭಾರತ 2ನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ವಿಶ್ವಕಪ್ನೊಂದಿಗೆ ಶುಕ್ರವಾರ ತವರಿಗೆ ಕಾಲಿಟ್ಟ ಭಾರತ ತಂಡಕ್ಕೆ ಅದ್ಭುತ ಸ್ವಾಗತ ಸಿಕ್ಕಿತು. ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿತು. ಲಕ್ಷಾಂತರ ಅಭಿಮಾನಿಗಳು ಈ ಗೆಲುವನ್ನು ಸಂಭ್ರಮಾಚರಣೆ ಮಾಡಿದ್ರು.ಆದರೆ ಇದೀಗ ಟೀಂ ಇಂಡಿಯಾ ಗೆದ್ದ ವಿಶ್ವಕಪ್ ಬಗ್ಗೆ ಕುತೂಹಲಕಾರಿಯಾದ ಚರ್ಚೆ ಶುರುವಾಗಿದೆ. ವಿಶ್ವ ಚಾಂಪಿಯನ್ನರು ತಂದ ಕಪ್ ನಕಲಿ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ.
ಹೌದು.. ಟೀಂ ಇಂಡಿಯಾ ಗೆದ್ದು ತಂದ ವಿಶ್ವಕಪ್ ಡುಪ್ಲಿಕೇಟ್ ಎನ್ನುವ ವಿಚಾರ ಎಲ್ಲರನ್ನೂ ಕೆರಳಿಸಿದೆ. ಈ ಕಪ್ ಗೆಲ್ಲೋಕೆ ಇಷ್ಟು ಕಷ್ಟ ಪಡಬೇಕಿತ್ತಾ? ಇದನ್ನು ಗೆಲ್ಲಲು ಅಲ್ಲಿಗೆ ಹೋಗಬೇಕಿತ್ತಾ? ಅನ್ನೋ ಪ್ರಶ್ನೆಗಳು ಉದ್ಭವವಾಗುತ್ತಿವೆ. ಟೀಂ ಇಂಡಿಯಾ ತಂದ ವಿಶ್ವಕಪ್ ಒರಿಜಿನಲ್? ಅಥವಾ ಡುಪ್ಲಿಕೇಟ್ ಅನ್ನೋ ಬಗ್ಗೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡೆಸುವ ನಡೆಸುವ ಟೂರ್ನಿಗಳಲ್ಲಿ ಪೋಟೋ ಶೂಟ್ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಐಸಿಸಿ ವರ್ಷದ ಲಾಂಚನದೊಂದಿಗೆ, ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸಲಾಗುತ್ತದೆ. ಮತ್ತು ಅದೇ ಟ್ರೋಫಿಯನ್ನು ಗೆದ್ದ ತಂಡ ಮನೆಗೆ ಕೊಂಡೊಯ್ಯುತ್ತದೆ. ಹಾಗಾದ್ರೆ ನಿಜವಾದ ಟ್ರೋಫಿ ಎಲ್ಲಿದೆ? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ.
ಅಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿಯ ಕೇಂದ್ರ ಕಛೇರಿಯಲ್ಲಿದೆ. ಫೋಟೋ ಶೂಟ್ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಛೇರಿಯಲ್ಲಿಡಲಾಗುತ್ತದೆ. ಯಾವುದೇ ತಂಡ ಟ್ರೋಫಿಯನ್ನು ಗೆದ್ದರೂ ಸಂಭ್ರಮಾಚರಣೆ ಮತ್ತು ಪೋಟೋ ಸೆಷನ್ವರೆಗೆ ಮಾತ್ರ ನೀಡಿ ನಂತರ ವಾಪಸ್ ಪಡೆದುಕೊಂಡು ನಕಲಿ ಟ್ರೋಫಿಯನ್ನು ಗೆದ್ದ ತಂಡಕ್ಕೆ ಹಸ್ತಾಂತರಿಸಲಾಗುತ್ತದೆ. ಆ ತಂಡ ಆ ನಕಲಿ ಟ್ರೋಫಿಯೊಂದಿಗೆ ಮನೆಗೆ ಹಿಂದಿರುಗುತ್ತದೆ. ಅದೇ ರೀತಿ ಈಗ ಭಾರತ ತಂಡ ಕೂಡ ನಕಲಿ ಟ್ರೋಫಿಯೊಂದಿಗೆ ತವರಿಗೆ ಬಂದಿದ್ದಾರೆ.