Hubli News: ಹುಬ್ಬಳ್ಳಿ : ಸಾರ್ವಜನಿಕರಿಗೆ ಉಪಟಳ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಿ ಸಾರ್ವಜನಿಕರಿಗೆ ಇರಿಸು ಮುರಿಸು ಮಾಡುತ್ತಿದ್ದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ರಾತ್ರಿ ಪೊಲೀಸ್ ಏರಿಯಾ ಡಾಮಿನೇಷನ್ ಕ್ರಮವನ್ನು ಕೈಗೊಳ್ಳಲಾಯಿತು.
ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 20 ಜನ ರೌಡಿ ಶೀಟರ್’ಗಳನ್ನು ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿ ಹಾಗೂ ಖಾಸಗಿ ಲೇಔಟ್ ಗಳಲ್ಲಿ ಮದ್ಯ ಸೇವನೆ ಮಾಡುತ್ತಿದ್ದ 45 ಕ್ಕೂ ಹೆಚ್ಚು ಜನರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದ್ದಾರೆ. ಇನ್ನೂ ಅಧಿಕಾರಿಗಳು ರೌಡಿ ಶೀಟರ್ ಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ್ರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವ ಬಗ್ಗೆ ವಾರ್ನಿಂಗ್ ಕೂಡಾ ನೀಡಿದರು.
ಕಮಿಷನರ್ ಶಶಿ ಕುಮಾರ ಮಾರ್ಗದರ್ಶನದಲ್ಲಿ ಡಿಸಿಪಿ ಗಳಾದ ರವೀಶ್, ನಂದಗಾವಿ ಎಸಿಪಿ ಶಿವಪ್ರಕಾಶ್ ಹಾಗೂ ಕೇಶ್ವಾಪುರ ಠಾಣೆಯ ಇನ್ಸೆಕ್ಟರ್ ಹಟ್ಟಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಡಿಸಿಪಿ ರವೀಶ್ ಕಾನೂನು ಮೀರಿ ಅಹಿತಕರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು.




