Health Tips: ಚಟದಲ್ಲಿ ಮಾಮೂಲಿ ಚಟ ಅಂದ್ರೆ ಪಾನ್ ಬೀಡಾ ತಿನ್ನುವ ಚಟ. ಇದು ಆರೋಗ್ಯಕ್ಕೆ ಅಷ್ಟು ಮಾರಕವಲ್ಲದಿದ್ದರೂ ಕೂಡ, ಕೆಲವೊಮ್ಮೆ ಬೀಡಾ ತಿನ್ನಲು ಶುರು ಮಾಡಿದ್ರೆ, ಪ್ರತಿದಿನ ಅದು ಬೇಕೆ ಬೇಕು ಅನ್ನಿಸಲಾರಂಭಿಸುತ್ತದೆ. ಆದರೆ ಪಾನ್ ಬೀಡಾ ತಿನ್ನುವವರು ಯಾವ ಅಂಶವನ್ನು ಗಮನದಲ್ಲಿ ಇರಿಸಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರಾದ ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಪಾನ್ ಅತೀ ಹೆಚ್ಚಾಗಿ ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಜರ್ದಾ ಬೀಡಾ ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದು, ಅತೀ ಹೆಚ್ಚು ಕೆಟ್ಟದಾಗಿರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ದುಷ್ಪರಿಣಾಮ ಬೀರುತ್ತದೆ. ಇನ್ನು ಇಡೀ ಪ್ರಪಂಚದಲ್ಲಿ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ, ನಾಲಿಗೆ ಮತ್ತು ಬಾಯಿಯ ಕ್ಯಾನ್ಸರ್ ಆಗುವುದು ಭಾರತದಲ್ಲೇ ಹೆಚ್ಚು. ಇದಕ್ಕೆ ಕಾರಣವೇ ಈ ಪಾನ್ ಬೀಡಾ.
ಹಾಗಾಗಿ ವೈದ್ಯರು ಈ ಬಗ್ಗೆ ಎಚ್ಚರಿಕೆ ಕೊಟ್ಟಿದ್ದು, ಪಾನ್ ಹೆಚ್ಚಾಗಿ ತಿಂದರೆ, ಬಾಯಿ ಕ್ಯಾನ್ಸರ್ ಬರುತ್ತದೆ. ಅಲ್ಲದೇ, ಹೆಚ್ಚು ಪಾನ್ ತಿನ್ನುವುದರಿಂದ, ಬಾಯಿಯ ಅಗಲ ಕಡಿಮೆಯಾಗುತ್ತ ಹೋಗುತ್ತದೆ. ಮುಂದೆ ನಾವು ಆಹಾರ ಕೂಡ ಸೇವಿಸಲು ಸಾಧ್ಯವಾಗುವುದಿಲ್ಲ. ಆ ರೀತಿಯಾಗಿ, ಕ್ಯಾನ್ಸರ್ ನಮ್ಮನ್ನು ಆವರಿಸುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.