Special Story: ಮಹೇಶ್ ಶೆಣೈ ಅವರು ಮಾರ್ನಿಂಗ್ ಕ್ಲಬ್ ಮೂಲಕ ಹಲವರಿಗೆ ಪರಿಚಯವಿರಬಹುದು. ಆದರೆ ಕರ್ನಾಟಕ ಟಿವಿಗೆ ಮಹೇಶ್ ಅವರು ಸಂದರ್ಶನ ನೀಡಿದ್ದು, ಶ್ರೀಮಂತರಾಗೋದು ಹೇಗೆ ಅಂತಾ ವಿವರಿಸಿದ್ದಾರೆ.
ಮಹೇಶ್ ಶೆಣೈ ಅವರು ಹೇಳುವ ಪ್ರಕಾರ, ನಾವು ಶ್ರೀಮಂತರಾಗಬೇಕು ಅಂದ್ರೆ, ನಾವು ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಏಕೆಂದರೆ, ಬ್ರಾಹ್ಮಿ ಮುಹೂರ್ತದಲ್ಲಿ ಅಂಥದ್ದೊಂದು ಶಕ್ತಿ ಇದೆ. ಹಾಗಾಗಿಯೇ ಹಿಂದಿನ ಕಾಲದವರು, ಅಷ್ಟು ಆರೋಗ್ಯವಾಗಿ ಇದ್ದಿದ್ದು. ಆದೆರ ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುವವರ ಸಂಖ್ಯೆ ಕಡಿಮೆಯಾಗಿದ್ದು, ಸೋಂಬೇರಿಗಳಾಗುತ್ತಿದ್ದಾರೆ.
ಅಲ್ಲದೇ, ವಿದೇಶಗಳಲ್ಲೂ ಈಗ ಬ್ರಾಹ್ಮಿ ಮುಹೂರ್ತದ ಬಗ್ಗೆ ಅರಿವಾಗುತ್ತಿದ್ದು, ಅವರು ಕೂಡ ಬೆಳಿಗ್ಗಿನ ಜಾವ 4 ಗಂಟೆಗೆ, 5 ಗಂಟೆಗೆ ಎದ್ದು, ಯೋಗಾಭ್ಯಾಸಗಳನ್ನು ಮಾಡಿ, ಮಾರ್ನಿಂಗ್ ಕ್ಲಬ್ ಎಂಬ ಕಾರ್ಯಕ್ರಮದ ಮೂಲಕ ಇತರರಿಗೆ ಈ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಮಹೇಶ್ ಶೆಣೈ ಹೇಳಿದ್ದಾರೆ.
ಇನ್ನು ಬ್ರಾಹ್ಮಿ ಮುಹೂರ್ತದಿಂದ ನಿಮಗೇನು ಲಾಭವಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಶೆಣೈ, ಬ್ರಾಹ್ಮಿ ಮುಹೂರ್ತದಲ್ಲಿ ನಾನು ಏಳುವುದಕ್ಕಿಂತ ಮುಂಚೆ, ನನ್ನ ಜೀವನ ಗೊಂದಲದ ಗೂಡಾಗಿತ್ತು. ಎಲ್ಲಾ ವಿಷಯದಲ್ಲೂ ನಾನು ಫೆಲ್ಯೂವರ್ ಆಗಿದ್ದೆ. ಆದರೆ ಬಳಿಕ ನನಗೆ ಗೊತ್ತಾಗಿದ್ದೇನೆಂದರೆ, ಓರ್ವ ವ್ಯಕ್ತಿ ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದರೆ, ಒಂದು ಮೈಂಡ್ಸೆಟ್ ಇರಬೇಕು. ಆದರೆ ನನ್ನ ಮೈಂಡ್ಸೆಟ್ ತಪ್ಪು ಅನ್ನೋದು ನನಗೆ ಗೊತ್ತಾಯಿತು.
ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ಸಂಬಂಧದಲ್ಲಿ ಸಮಸ್ಯೆ, ಹೀಗೆ ಹಲವು ಸಮಸ್ಯೆಗಳಿತ್ತು. ಆದರೆ ನಾನು ಬ್ರಾಹ್ಮಿ ಮುಹೂರ್ತದಲ್ಲಿ ಏಳಲು ಶುರು ಮಾಡಿಯಾದ ಮೇಲೆ, ನನ್ನ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ನಡೆಯಲು ಶುರುವಾಯಿತು. ನನ್ನ ಜೀವನದಲ್ಲಿ ಒಂದು ಘಟನೆ ನಡೆಯಿತು. ಆ ಘಟನೆಯಿಂದಲೇ, ನಾನು ಎಲ್ಲರಿಗೂ ಬ್ರಾಹ್ಮಿ ಮುಹೂರ್ತದ ಬಗ್ಗೆ ತಿಳಿಸಿಕೊಡಬೇಕು ಎಂದು ನಿರ್ಧರಿಸಿದೆ ಎಂದು ಮೇಹಶ್ ಶೆಣೈ ಹೇಳಿದ್ದಾರೆ. ಆ ಘಟನೆ ಏನೆಂದು ತಿಳಿಯಲು ಈ ವೀಡಿಯೋ ನೋಡಿ.




