Wednesday, September 11, 2024

Latest Posts

R.Ashwin : ಹೊಸ ತಂಡ ಖರೀದಿಸಿದ ಆರ್​​ ಅಶ್ವಿನ್!

- Advertisement -

ಟೀಮ್ ಇಂಡಿಯಾ ಸ್ಟಾರ್​ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹೊಸ ತಂಡವನ್ನು ಖರೀದಿಸಿದ್ದಾರೆ. ವಿಶೇಷ ಎಂದರೆ ಅದು ಕ್ರಿಕೆಟ್ ತಂಡವಲ್ಲ.. ಫುಟ್ಬಾಲ್ ಕೂಡ ಅಲ್ಲ.. ಹಾಗಿದ್ರೆ ಯಾವ ತಂಡ? ಅನ್ನೋ ಮಾಹಿತಿ ಇಲ್ಲಿದೆ.
ರವಿಚಂದ್ರನ್ ಅಶ್ವಿನ್ ಚೆಸ್ ತಂಡವೊಂದನ್ನು ಖರೀದಿಸಿದ್ದು, ಮುಂಬರುವ ಗ್ಲೋಬಲ್ ಚೆಸ್ ಲೀಗ್ 2024ರಲ್ಲಿ ಈ ತಂಡ ಸ್ಪರ್ಧಿಸಲಿದೆ. ಅಮೆರಿಕನ್ ಗ್ಯಾಂಬಿಟ್ಸ್ ಎನ್ನುವ ಹೆಸರಿನ ತಂಡವನ್ನು ಅಶ್ವಿನ್ ಸಹ-ಮಾಲೀಕತ್ವದಲ್ಲಿ ಖರೀದಿಸಿದ್ದಾರೆ. ಟೆಕ್ ಮಹೀಂದ್ರಾ ಮತ್ತು ಅಂತಾರಾಷ್ಟ್ರೀಯ ಚೆಸ್ ಸಂಸ್ಥೆಯೊಂದು ಜಂಟಿಯಾಗಿ ಆಯೋಜಿಸಿರುವ ಗ್ಲೋಬಲ್ ಚೆಸ್ ಲೀಗ್​ನ 2ನೇ ಆವೃತ್ತಿಯಲ್ಲಿ ಅಮೆರಿಕನ್ ಗ್ಯಾಂಬಿಟ್ಸ್ ತಂಡ ಕಾಣಿಸಿಕೊಳ್ಳಲಿದೆ. ಅಶ್ವಿನ್ ಅವರ ನೂತನ ತಂಡವನ್ನು ಸ್ವಾಗತಿಸಲು ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.

 

ತಂಡ ಖರೀಸಿರುವ ಬಗ್ಗೆ ರವಿಚಂದ್ರನ್ ಅಶ್ವಿನ್ ಮಾತನಾಡಿ, “ಚೆಸ್ ಜಗತ್ತಿನಲ್ಲಿ ಅಮೆರಿಕನ್ ಗ್ಯಾಂಬಿಟ್ಸ್ ತಂಡ ಖರೀಸಿದ್ದು ರೋಮಾಂಚನ ನೀಡಿದೆ. ನಮ್ಮ ತಂಡವು ಕಾರ್ಯತಂತ್ರದ ದೃಢತೆ ಮತ್ತು ಅಚಲ ದೃಢನಿಶ್ಚಯದೊಂದಿಗೆ ಆಟವನ್ನು ಹೊಸ ರೀತಿಯಲ್ಲಿ ಪ್ರಸ್ತುತಪಡಿಸಲು ನಿರ್ಧರಿಸಿದೆ. ಮಾಲೀಕರಲ್ಲಿ ಒಬ್ಬನಾಗಿ, ನಾನು ತಂಡದ ಪ್ರಯಾಣದ ಭಾಗವಾಗಲು ಮತ್ತು ಯಶಸ್ಸಿಗೆ ನೆರವಾಗಲು ಉತ್ಸುಕುನಾಗಿದ್ದೇನೆ ಎಂದಿದ್ದಾರೆ. ಅಮೆರಿಕನ್ ಗ್ಯಾಂಬಿಟ್ಸ್ ತಂಡಕ್ಕೆ ಅಶ್ವಿನ್ ಜೊತೆ ಉದ್ಯಮಿಗಳಾದ ಪ್ರಚುರ ಪಿ.ಪಿ ಮತ್ತು ವೆಂಕಟ್ ಕೆ ನಾರಾಯಣ್ ಕೂಡ ಜಂಟಿ ಮಾಲೀಕತ್ವ ಹೊಂದಿದ್ದಾರೆ.

6 ತಂಡಗಳ ಈ ಟೂರ್ನಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 12ರಂದು ಮುಕ್ತಾಯವಾಗಲಿದೆ. ಪಂದ್ಯಾವಳಿ ಲಂಡನ್​​ನಲ್ಲಿ ನಡೆಯಲಿದೆ. ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪ್ರತಿ ತಂಡಗಳು 10ಪಂದ್ಯಗಳನ್ನು ಆಡಲಿವೆ. ಅಂಕ ಪಟ್ಟಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ 2ತಂಡಗಳು ಫೈನಲ್ ಪ್ರವೇಶಿಸಲಿವೆ. ಒಟ್ಟಾರೆಯಾಗಿ ಕ್ರಿಕೆಟ್ ಹೊರತುಪಡಿಸಿ ಚೆಸ್ ಆಟವನ್ನು ಇಷ್ಟಪಡುವ ಅಶ್ವಿನ್ ಚೆಸ್ ಲೀಗ್ ಗಾಗಿ ತಂಡವನ್ನೇ ಖರೀದಿ ಮಾಡಿರುವುದು ಆಸಕ್ತಿದಾಯಕ ಸಂಗತಿ.

- Advertisement -

Latest Posts

Don't Miss