Thursday, October 16, 2025

Latest Posts

Rahul Gandhi: ಪತ್ರಕರ್ತರ ವಿರುದ್ಧ ರೊಚ್ಚಿಗೆದ್ದ ರಾಹುಲ್! ಸುದ್ದಿಗೋಷ್ಠಿ ವೇಳೆ ರಾಹುಲ್ ಕೋಪಗೊಂಡಿದ್ದೇಕೆ?

- Advertisement -

ಲೋಕಸಭಾ ವಿಪಕ್ಷನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಟಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡದೆ ಹೋರ ನೆಡೆದಿದ್ದಾರೆ. ರಾಹುಲ್ ಗಾಂಧಿ ಕೋಪದಿಂದ ತೆಗೆದುಕೊಂಡ ಈ ನಿರ್ಧಾರಕ್ಕೆ ಎಲ್ಲಾಕಡೆಗೂ ಚರ್ಚೆಗೆ ಕಾರಣವಾಗಿದೆ.

ಮಣಿಪುರದಲ್ಲಿ ಸುದ್ದಿಗೋಷ್ಠಿ ನೆಡೆಸಿದ ರಾಹುಲ್ ಗಾಂಧಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಮೊದಲು ನಾನು ಏನು ಹೇಳುತ್ತಿದ್ದೇನೆ ಅದನ್ನು ಗೌರವಿಸಿ ಎಂದಿದ್ದಾರೆ. ನಾನು ಇಲ್ಲಿಗೆ ಸ್ಪಷ್ಟವಾದ ಸಂದೇಶ ರವಾನಿಸಲು ಬಂದಿದ್ದೇನೆ. ಬೇರೆ ರೀತಿಯ ಸ್ವರೂಪ ಪಡೆದುಕೊಳ್ಳುವಂತೆ ಸಿದ್ಧವಾಗಿರುವ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಯಾವುದೇ ಆಸಕ್ತಿ ಇಲ್ಲ ಎಂದಿದ್ದಾರೆ. ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಎಲ್ಲರಿಗೂ ತಿಳಿಸಿದ್ದೇನೆ. ಭಾರತದಲ್ಲಿರುವ ಸುಂದರ ರಾಜ್ಯಗಳ ಪೈಕಿ ಮಣಿಪುರ ಸಹ ಒಂದಾಗಿದೆ ಎಂದು ಹೇಳಿ ಸುದ್ದಿಗೋಷ್ಠಿಯಿಂದ ಕೋಪದಿಂದ ಹೊರ ನೆಡೆದಿದ್ದಾರೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಗಳು ಮಣಿಪುರಕ್ಕೆ ಬಂದು ಇಲ್ಲಿಯ ಜನರ ಸಮಸ್ಯೆಗಳನ್ನು ಆಲಿಸಬೇಕು ಅನ್ನೋದು ನನ್ನ ಅಭಿಪ್ರಾಯವಾಗಿದೆ. ಮಣಿಪುರ ಸಹ ಭಾರತದ ಒಂದು ರಾಜ್ಯವಾಗಿದೆ. ಇಲ್ಲಿ ನಡೆದ ಹಿಂಸಾಚಾರದ ಬಗ್ಗೆ ತಳಮಟ್ಟದಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನು ಮೋದಿ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ, ಮಣಿಪುರ ಹಿಂಸಾಚಾರದಿಂದ ತತ್ತರಿಸಿದ್ದು, ಪ್ರಧಾನಿಗಳು ಸಮಯ ಮಾಡಿಕೊಂಡು ಒಂದು ಅಥವಾ ಎರಡು ದಿನ ಮಣಿಪುರಕ್ಕೆ ಭೇಟಿ ನೀಡುವುದು ಅತ್ಯವಶ್ಯಕವಾಗಿದೆ. ಸದ್ಯದ ಪರಿಸ್ಥಿತಿಯ ಸುಧಾರಣೆಗಾಗಿ ಕೇಂದ್ರ ಸರ್ಕಾರದ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಸಹ ಬೆಂಬಲ ನೀಡುತ್ತದೆ. ಆದ್ರೆ ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪ್ರಧಾನಿಗಳು ತಿಳಿದುಕೊಳ್ಳಬೇಕು ಎಂದು ರಾಹುಲ್ ಆಗ್ರಹಿಸಿದ್ರು.

- Advertisement -

Latest Posts

Don't Miss