Monday, July 22, 2024

Latest Posts

ಶಿಷ್ಟಾಚಾರ ಪಾಲಿಸದ ಯಸಳೂರು ಪಿಡಿಓ ದೇವರಾಜ್‌ರವರಿಗೆ ಶಾಸಕರ ತರಾಟೆ

- Advertisement -

Hassan News: ಹಾಸನ: ಸಕಲೇಶಪುರ: ಇತ್ತೀಚೆಗಷ್ಟೆ ಯಸಳೂರು ಗ್ರಾ.ಪಂ ವ್ಯಾಪ್ತಿಯ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಮೃತ ಅರ್ಜುನ ಕಾಡಾನೆಯ ಸ್ಮಾರಕದ ಉದ್ಘಾಟನೆ ಸಮಾರಂಭದ ವೇಳೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಜರಿದ್ದು ಆದರೆ ಆ ಕಾರ್ಯಕ್ರಮಕ್ಕೆ ಪಿಡಿಓ ಗೈರುಹಾಜರಾದ ಹಿನ್ನೆಲೆಯಲ್ಲಿ ಶಾಸಕರು ಡೆಂಗ್ಯೂ ಜ್ವರ ನಿಯಂತ್ರಣ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡು ಶಿಸ್ತು ಕ್ರಮ ಕೈಗೊಳ್ಳುವಂತೆ ಜಿ.ಪಂ ಉಪ ಕಾರ್ಯದರ್ಶಿಗೆ ಸೂಚಿಸಿದರು.

ಇನ್ನೊಂದೆಡೆ 12 ವರ್ಷದ ಬಾಲಕನ ಬರ್ಬರ ಹತ್ಯೆ ಮಾಡಲಾಗಿದೆ. ಕೊಲೆಗಡುಕರು ಶವವನ್ನು ರೈಲ್ವೆ ಟ್ರ್ಯಾಕ್ ಬಳಿ ಎಸೆದು ಹೋಗಿದ್ದಾರೆ. ಹಾಸನ ಹೊರವಲಯದ, ಬಸವನಹಳ್ಳಿ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಶವ ಪತ್ತೆಯಾಗಿದ್ದು, ಕುಶಾಲ್ ಗೌಡ ಮೃತ ಬಾಲಕನಾಗಿದ್ದಾನೆ. ಕೊಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.

ಕೊಲೆಯನ್ನು ರೈಲು ಅಪಘಾತವೆಂದು ಬಿಂಬಿಸಲು ಹಂತಕರು, ರೈಲ್ವೆ ಟ್ರ್ಯಾಕ್ ಬಳಿ, ಎಸೆದು ಹೋಗಿದ್ದಾರೆ.  ಚಿಕ್ಕಹೊನ್ನೇನಹಳ್ಳಿಯ ವೆಂಕಟೇಶ ರೂಪ ದಂಪತಿ ಪುತ್ರ ಕೊಲೆಯಾದ ಬಾಲಕ ಕುಶಾಲ್ ಆಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest Posts

Don't Miss