ಬೆಂಗಳೂರು: ಡಿಗ್ರಿ ಪಾಸಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿಸುದ್ಧಿ. ಭಾರತದ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ ಪ್ರಸ್ತುತ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಜುಲೈ 26 ಕೊನೆಯ ದಿನವಾಗಿದೆ. ಪದವೀಧರರು, ಸ್ನಾತಕೋತ್ತರ ಪದವೀಧರರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್, ಡೇಟಾ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.
ಕರ್ನಾಟಕ ಬ್ಯಾಂಕ್ನಲ್ಲಿ ಡೇಟಾ ಎಂಜಿನಿಯರ್, ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ ಸೇರಿ ಒಟ್ಟು 14 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ದಿನ ನಿಗದಿಪಡಿಸಲಾಗಿದ್ದು 26 ಜುಲೈ 2024 ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ರೆಸ್ಯೂಮ್ ಕಳುಹಿಸುವ ಮೂಲಕ ಅಪ್ಲೈ ಮಾಡಬಹುದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿ ಕರ್ನಾಟಕ ಬ್ಯಾಂಕ್ ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ:
ಹುದ್ದೆಯ ಮಾಹಿತಿ: ಡೇಟಾ ಎಂಜಿನಿಯರ್- 11, ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 1, ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 1, ಫೈರ್ವೆಲ್ ಅಡ್ಮಿನಿಸ್ಟ್ರೇಟರ್- 1
ವಿದ್ಯಾರ್ಹತೆ:
ಡೇಟಾ ಎಂಜಿನಿಯರ್- ಬಿ.ಎಸ್ಸಿ, ಬಿಸಿಎ, ಬಿಇ/ಬಿ.ಟೆಕ್, ಪದವಿ, ಎಂಸಿಎ, ಎಂ.ಟೆಕ್
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್, ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್, ಫೈರ್ವೆಲ್ ಅಡ್ಮಿನಿಸ್ಟ್ರೇಟರ್- ಬಿಇ/ಬಿ.ಟೆಕ್, ಪದವಿ, ಎಂಸಿಎ
ವಯೋಮಿತಿ:
ಡೇಟಾ ಎಂಜಿನಿಯರ್- 30 ವರ್ಷ
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷ
ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷ
ಫೈರ್ವೆಲ್ ಅಡ್ಮಿನಿಸ್ಟ್ರೇಟರ್- 35 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಡೇಟಾ ಎಂಜಿನಿಯರ್- ಮಾಸಿಕ ₹ 48,480-85,920
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್-ಮಾಸಿಕ ₹ 64,820-93,960
ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- ಮಾಸಿಕ ₹ 64,820-93,960
ಫೈರ್ವೆಲ್ ಅಡ್ಮಿನಿಸ್ಟ್ರೇಟರ್- ಮಾಸಿಕ ₹ 64,820-93,960
ಉದ್ಯೋಗದ ಸ್ಥಳ: ಬೆಂಗಳೂರು
ಆಯ್ಕೆ ಪ್ರಕ್ರಿಯೆ: ಕ್ವಾಲಿಫಿಕೇಶನ್, ಅನುಭವ ಮತ್ತು ಸಂದರ್ಶನದ ಮೂಲಕ
ಅರ್ಜಿ ಹಾಕೋದು ಹೇಗೆ? : ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ – recruitment@ktkbank.comಗೆ ಕಳುಹಿಸಬೇಕು




