Monday, July 22, 2024

Latest Posts

ಆಟಿ ತಿಂಗಳ ಖಾದ್ಯ: Pathrode Recipe

- Advertisement -

Special Recipe: ಆಟಿ ತಿಂಗಳು ಎಂದರೆ, ಆಷಾಢ ಮತ್ತು ಶ್ರಾವಣ ಮಾಸದ ತಿಂಗಳು. ತುಳುನಾಡಿಗರು ಈ ತಿಂಗಳನ್ನು ಆಟಿ ತಿಂಗಳು ಎನ್ನುತ್ತಾರೆ. ಇನ್ನು ಕೆಲ ದಿನಗಳಲ್ಲೇ ಆಟಿ ತಿಂಗಳು ಶುರುವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಮತ್ತು ವಾಡಿಕೆಯ ಪ್ರಕಾರ, ಆಟಿ ತಿಂಗಳಿನಲ್ಲಿ ಕೆಸುವಿನ ಸೊಪ್ಪು ತಿನ್ನಬೇಕು ಎನ್ನುವ ನಿಯಮವಿದೆ. ಹಾಗಾಗಿ ಮಂಗಳೂರಿಗರು ಕೆಸುವಿನ ಸೊಪ್ಪಿನ ಸಾರು, ಚಟ್ನಿ, ಗೊಜ್ಜು ಸೇರಿ ಅನೇಕ ರೀತಿ ತಿನಿಸು ಮಾಡುತ್ತಾರೆ. ಅದರಲ್ಲಿ ವಿಶೇಷ ಖಾದ್ಯ ಎಂದರೆ, ಪತ್ರೋಡೆ. ಪತ್ರೋಡೆಯ ರುಚಿ ಎಂಥದ್ದು ಅಂತ ತಿಂದವರಿಗೇ ಗೊತ್ತಿರುತ್ತದೆ. ಹಾಗಾದ್ರೆ ಪತ್ರೋಡೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಕೆಸುವಿನ ಸೊಪ್ಪು, ಎರಡು ಗ್ಲಾಸ್ ಅಕ್ಕಿ, ಒಂದು ಕಪ್ ತೆಂಗಿನ ತುರಿ, ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಕೊಂಚ ಹುಣಸೆಹಣ್ಣು, ಬೆಲ್ಲ, ಉಪ್ಪು, 5ರಿಂದ 6 ಒಣಮೆಣಸು, ಇವಿಷ್ಟು ಪತ್ರೋಡೆ ಮಾಡಲು ಬೇಕಾಗುವ ಸಾಮಗ್ರಿ.

ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಅರ್ಧ ದಿನ ನೆನೆಸಿಡಬೇಕು. ಬಳಿಕ ಗ್ರೈಂಡರ್‌ನಲ್ಲಿ ಹಾಕಿ ರುಬ್ಬಬೇಕು. ಇನ್ನೊಂದೆಡೆ ಮಿಕ್ಸಿ ಜಾರ್‌ನಲ್ಲಿ ಕೊಬ್ಬರಿ ತುರಿ, ಒಣಮೆಣಸು, ಜೀರಿಗೆ, ಕೊತ್ತೊಂಬರಿ ಕಾಳು, ಬೆಲ್ಲ, ಒಣಮೆಣಸು, ಉಪ್ಪು, ಹುಣಸೆಹಣ್ಣು ಇವಿಷ್ಟನ್ನು ಹಾಕಿ ಕೊಂಚ ನೀರು ಹಾಕಿ ರುಬ್ಬಿಕೊಳ್ಳಬೇಕು, ತರಿ ತರಿಯಾಗಿ ರುಬ್ಬಿದ ಬಳಿಕ, ರುಬ್ಬಿಕೊಂಡ ಮಸಾಲೆಯನ್ನು ರುಬ್ಬಿಕೊಂಡ ಅಕ್ಕಿ ಹಿಟ್ಟಿಗೆ ಸೇರಿಸಿಕೊಳ್ಳಿ. ಸ್ವಲ್ಪ ದಪ್ಪವಾಗಲು, ಈ ಹಿಟ್ಟಿಗೆ ನೀವು ಅವಲಕ್ಕಿ ಸೇರಿಸಬಹುದು.

ಕೆಸುವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಒರೆಸಿ, ಅದರ ದಂಟನ್ನು ಸರಿಯಾಗಿ ಕತ್ತರಿಸಿ ತೆಗೆಯಬೇಕು. ಬಳಿಕ ಕೆಸುವಿನ ಸೊಪ್ಪನ್ನು ಉಲ್ಟಾ ಇಟ್ಟು, ಅದರ ಮೇಲೆ ಹಿಟ್ಟನ್ನು ಅದರ ಮೇಲೆ ಸವರಿ. ಬಳಿಕ ಅದೇ ರೀತಿ ಇನ್ನೊಂದು ಎಲೆ ಇಟ್ಟು, ಹಿಟ್ಟನ್ನು ಸವರಿ, ಇದಾದ ಬಳಿಕ, ಎಲೆಗಳನ್ನು ಮಡಿಚಿ, ಪತ್ರೋಡೆ ಶೇಪ್ ಮಾಡಿ ಇಡಿ.

ಇತ್ತ ಇಡ್ಲಿ ಪಾತ್ರೆಯಲ್ಲಿ ನೀರು ಇಟ್ಟು 10 ನಿಮಿಷ ಬಿಸಿ ಮಾಡಿ, 10 ನಿಮಿಷದ ಬಳಿಕ ಇಡ್ಲಿ ಪಾತ್ರೆ ರೆಡಿಯಾಗಿರುತ್ತದೆ. ಅದರಲ್ಲಿ ಹಿಟ್ಟು ಮತ್ತು ಎಲೆಯಿಂದ ರೆಡಿ ಮಾಡಿರುವ ಪತ್ರೋಡೆ ಇಟ್ಟು 1 ತಾಸು ಬೇಯಿಸಿ. ಬಳಿಕ ಪತ್ರೋಡೆಗೆ ತೆಂಗಿನ ಎಣ್ಣೆ ಹಾಕಿ, ಸೇವಿಸಿ.

- Advertisement -

Latest Posts

Don't Miss