ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಮತ್ತೆ ಜಲಾವೃತಗೊಂಡ ಸಂಪರ್ಕ ಸೇತುವೆಗಳು

Chikkodi News: ಚಿಕ್ಕೋಡಿ: ಮಹಾರಾಷ್ಟ್ರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಸಂಪರ್ಕ ಸೇತುವೆಗಳು ಮತ್ತೆ ಜಲಾವೃತಗೊಂಡಿದೆ.

ದೂದಗಂಗಾ ನದಿಗೆ ನಾಲ್ಕು ಸೇತುವೆ ಕೃಷ್ಣಾ ನದಿಗೆ ಒಂದು ಸೇತುವೆ ಮುಳುಗಡೆಯಾಗಿದೆ. ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ, ಕಾರದಗಾ-ಬೋಜ್, ಕುನ್ನೂರ-ಬೋಜವಾಡಿ, ದತ್ತವಾಡ-ಮಲ್ಲಿಕವಾಡ, ಬಾವನಸೌದತ್ತಿ-ಮಾಂಜರಿ ಸಂಪರ್ಕಿಸುವ ಸೇತುವೆ ಮುಳುಗಡೆಗೊಂಡಿದೆ.

ದೂದಗಂಗಾ, ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿ‌ ಹರಿಯುತ್ತಿರುವ ದೂದಗಂಗಾ, ಕೃಷ್ಣಾ ನದಿ. ಕೃಷ್ಣಾ ನದಿಯಲ್ಲಿ 50ಸಾವಿರ ಕ್ಯೂಸೆಕ್ ನೀರು ಒಳ ಹರಿವು. ಮುಳುಗಿದ ಸೇತುವೆ ಎರಡು ಬದಿಯಲ್ಲಿ ಬ್ಯಾರಿಕೆಡ್ ಹಾಕಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಬಂದ್ ಮಾಡಿ, ಪೊಲೀಸರು ಕಾವಲಿಗೆ ನಿಂತಿದ್ದಾರೆ.

About The Author