ಧಾರಾಕಾರ ಮಳೆಯಿಂದ ಉಕ್ಕಿ ಹರಿದ ಕೃಷ್ಣಾ ನದಿ: ಶ್ರಮಬಿಂದುಸಾಗರ ಬ್ಯಾರೇಜ್ ಮುಳುಗಡೆ

Bagalakote News: ಬಾಗಲಕೋಟೆ: ಧಾರಾಕಾರ ಮಳೆ ಇರುವ ಕಾರಣಕ್ಕೆ, ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 64 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಶ್ರಮಬಿಂದುಸಾಗರ ಬ್ಯಾರೇಜ್ ಮುಳುಗಡೆಯಾಗಿದೆ.

ಅಲ್ಲದೇ, ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುವ ಹಿನ್ನೆಲೆ, ಆಲಮಟ್ಟಿ ಜಲಾಶಯದಿಂದ 76 ಕ್ಯೂಸೆಕ್ ನೀರು ಹೊರಹೋಗಿದೆ. ಈ ಕಾರಣಕ್ಕೆ ಎಲ್ಲಿ ಗ್ರಾಮದಲ್ಲಿ ಪ್ರವಾಹ ಉಂಟಾಗುತ್ತದೆಯೋ ಎಂಬ ಭೀತಿ, ಈಗ ಗ್ರಾಮಸ್ಥರಲ್ಲಿ ಉಂಟಾಗಿದೆ. ಇನ್ನು ಯಾರೂ ನದಿಗೆ ಇಳಿಯದಂತೆ ಜಿಲ್ಲಾಡಳಿತ ನದಿ ಪಾತ್ರದ ಗ್ರಾಮಸ್ಥರಿಗೆ ಸೂಚಿಸಿದೆ.

About The Author