ಚಾಕುವಿನಿಂದ ಚುಚ್ಚಿ ದೇವಸ್ಥಾನದ ಪೂಜಾರಿಯ ಹ*ತ್ಯೆ ಮಾಡಿದ ದುಷ್ಕರ್ಮಿಗಳು

Hubli News: ಹುಬ್ಬಳ್ಳಿ: ದೇವಸ್ಥಾನವೊಂದರ ಪೂಜಾರಿಗೆ ದುಷ್ಕರ್ಮಿಗಳು ಚಾಕುವಿಂದ ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ನಗರದ ಎಪಿಎಂಸಿ ಬಳಿಯ ಈಶ್ವರನಗರದಲ್ಲಿ ಇಂದು ಭಾನುವಾರ ನಡೆದಿದೆ.

ಇಲ್ಲಿನ ವೈಷ್ಟೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದ ದೇವೇಂದ್ರಪ್ಪ ಹೊನ್ನಳಿ ಎಂಬವರು ಹತ್ಯೆಯಾಗಿದ್ದು, ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದುಷ್ಕರ್ಮಿಗಳು ಹತ್ಯೆಗೈದ್ದು ಪರಾರಿಯಾಗಿದ್ದು ಎನ್ನಲಾಗಿದ್ದು, ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಮಹಾಲಿಂಗಪ್ಪ ನಂದಗವಿ, ನವನಗರ ಎಪಿಎಂಸಿ ಠಾಣೆಯ ಇನ್ಸೆಕ್ಟರ್ ಹಾಗು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author