Wednesday, July 16, 2025

Latest Posts

ಗುರುಪೂರ್ಣಿಮೆ ಹಿನ್ನೆಲೆ ಧಾರವಾಡದಲ್ಲಿ ಗುರು-ಶಿಷ್ಯರ ವೇಷ ತೊಟ್ಟು ಪ್ರದರ್ಶನ ನೀಡಿದ ಪುಟಾಣಿಗಳು

- Advertisement -

Dharwad News: ಧಾರವಾಡ: ಗುರುಪೂರ್ಣಿಮೆ ಆಚರಣೆ ಹಿನ್ನೆಲೆ, ಧಾರವಾಡದಲ್ಲಿ ಭಾರತೀಯ ಗುರು-ಶಿಷ್ಯ ಪರರಂಪರೆ ಅನಾವರಣವಾಗಿದೆ.

ಧಾರವಾಡದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದು, ರಾಮಾಯಣ, ಪುರಾಣ, ಮಹಾಭಾರತ ಕಾಲದ ಗುರು ಶಿಷ್ಯರ ವೇಷಭೂಷಣ ತೊಟ್ಟು, ಸ್ಕಿಟ್ ಮಾಡಿದರು.

ಧಾರವಾಡನಗರದ ಮೃತ್ಯುಂಜಯ ನಗರ ಬಡಾವಣೆಯಲ್ಲಿ ಈ ಶಾಲೆ ಇದ್ದು, ವ್ಯಾಸ-ಗಣಪತಿ, ವಾಲ್ಮೀಕಿ, ದ್ರೋಣಾಚಾರ್ಯ-ಏಕಲವ್ಯ, ಚಂದ್ರಗುಪ್ತ-ಚಾಣಕ್ಯ, ಜಿಜಾಬಾಯಿ-ಶಿವಾಜಿ, ಷರೀಫ-ಗೋವಿಂದಭಟ್‌ ಗುರು ಶಿಷ್ಯ‌ ಪರಂಪರೆ ಪರಿಚಯ ಮಾಡಿಕೊಟ್ಟಿದ್ದಾರೆ.

ಸಿದ್ಧಾರೂಢ-ಗುರುನಾಥರೂಢ, ಸಿದ್ದೇಶ್ವರ ಸ್ವಾಮೀಜಿ, ವಿವೇಕಾನಂದ-ರಾಮಕೃಷ್ಷ ಪರಮಹಂಸ, ಗುರು ರಾಘವೇಂದ್ತ, ಸಾವಿತ್ರಿಬಾಯಿ ಪುಲೆ, ಸಾಯಿಬಾಬಾ, ಗೌತಮ ಬುದ್ಧರ ವೇಷ ಧರಿಸಿ ಮಕ್ಕಳು ಚಂದವಾಗಿ ನಾಟಕ ಪ್ರದರ್ಶನ ಮಾಡಿದ್ದಾರೆ.

ಇನ್ನು ಗುರುಪೂರ್ಣಿಮೆಯ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಕೂಡ ಭಾಗವಹಿಸಿದ್ದು, ಮಕ್ಕಳನ್ನು ವಿವಿಧ ಗುರು-ಶಿಷ್ಯರ ವೇಷದಲ್ಲಿ ಕಂಡು ಖುಷಿಪಟ್ಟಿದ್ದಾರೆ.

- Advertisement -

Latest Posts

Don't Miss