Belagavi News: ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಘಟಪ್ರಭಾ ನದಿ ಕೂಡ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಗೋಕಾಕ್ ಜಲಪಾತದಲ್ಲಿ ನೀರು ಹೆಚ್ಚಾಗಿ, ನೋಡಲು ಸಖತ್ ಸೂಪರ್ ಆಗಿ ಕಾಣುತ್ತಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿರುವ ಈ ಜಲಪಾತ ಭಾರತದ ನಯಾಗಾರ ಫಾಲ್ಸ್ ಅಂತಲೇ ಖ್ಯಾತಿ ಗಳಿಸಿದೆ. ಕರ್ನಾಟಕದ 2ನೇ ದೊಡ್ಡ ಜಲಪಾತ ಇದಾಗಿದ್ದು, 180ಅಡಿ ಮೇಲಿಂದು ಧುಮ್ಮಿಕ್ಕಿ ಬೀಳುವ ಜಲಧಾರೆಯನ್ನು ನೋಡೋದೇ ಒಂದು ಅದ್ಭುತ.
ಇನ್ನು ಮಳೆಗಾಲದಲ್ಲಿ ಪ್ರವಾಸಿಗರು ಹೆಚ್ಚಾಗಿ ಇಂಥ ಫಾಲ್ಸ್‌ಗಳಿಗೆ ಬರುತ್ತಾರೆ. ಈ ಜಲಪಾತ ವೀಕ್ಷಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರವಾಸಿಗರು ಬರುತ್ತಿದ್ದಾರೆ. ಜಲಪಾತಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸ ಮಿತ್ರ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ಜಿಲ್ಲಾಡಳಿತ ಪ್ರವಾಸಿಗರ ಸೆಲ್ಪಿ ಹುಚ್ಚಾಟಕ್ಕೆ ಬ್ರೇಕ್ ಹಾಕಿದೆ.