Chikkodi News: ಚಿಕ್ಕೋಡಿ: ಬೆಳಗಾವಿಯಲ್ಲಿ ನೆರೆಯ ಜೊತೆಗೆ ನದಿ ತೀರದಲ್ಲಿ ಜನರಿಗೆ ಈಗ ಮೊಸಳೆಗಳ ಕಾಟ ಶುರುವಾಗಿದೆ. ಎಲ್ಲಿ ಮೊಸಳೆ ರಸ್ತೆಗೆ, ಮನೆಯ ತನಕ ಬಂದು ಬಿಡುತ್ತದೆಯೋ ಎಂಬ ಭಯ ಶುರುವಾಗಿದೆ.
ಏಕೆಂದರೆ, ಮಳೆಗಾಲದಲ್ಲಿ ನದಿಯ ಮಟ್ಟ ಮೀರಿ ನೀರು ಹರಿಯುತ್ತಿರುವ ಕಾರಣ, ಅದರಲ್ಲಿ ವಾಸವಿದ್ದ ಭಾರೀ ಗಾತ್ರದ ಮೊಸಳೆಗಳು ಜನರಲ್ಲಿ ಆತಂಕ ಸೃಷ್ಟಿಸಿದೆ. ಏಕೆಂದರೆ, ಮೊಬೈಲ್ನಲ್ಲಿಯೂ ಮೊಸಳೆಗಳು ನದಿಯಲ್ಲಿ ಇರುವ ದೃಶ್ಯ ಓಡಾಡುತ್ತಿದ್ದು, ಇದು ಆತಂಕ ಹೆಚ್ಚಾಗಲು ಕಾರಣಲಾಗಿದೆ.
ದೂದಗಂಗಾ ನದಿಯ ಪ್ರವಾಹದಲ್ಲಿ ಭಾರೀ ಗಾತ್ರದ ಮೊಸಳೆ ಇದೆ ಎಂಬ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಇನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದ ಬಳಿ ನದಿ ನೀರಿನಲ್ಲಿ ಬೃಹತ್ ಗಾತ್ರದ ಮೊಸಳೆ ಓಡಾಡುತ್ತಿದೆ. ಹಾಗಾಗಿ ಜನರು ನದಿ ತೀರಕ್ಕೆ ಇಳಿಯದಂತೆ ಪೊಲೀಸರು ಮನವಿ ಮಾಡಿದ್ದಾರೆ.




