Horoscope: ಜೀವನ ಸಂಗಾತಿಯನ್ನು ಹಲವರು ಪ್ರೀತಿಸುತ್ತಾರೆ ಅದರಲ್ಲೇನು ವಿಶೇಷತೆ ಅಂತಾ ಕೆಲವರು ಕೇಳಬಹುದು. ಆದರೆ ಕೆಲ ರಾಶಿಯವರು ಎಷ್ಟು ಪ್ರೀತಿಸುತ್ತಾರೆ ಅಂದ್ರೆ, ಸಂಗಾತಿಯ ಎದುರು ಅದನ್ನು ಹೇಳಿಕೊಳ್ಳದೇ ಇದ್ದರೂ, ಆ ಕಾಳಜಿ, ಪ್ರೀತಿ ಸದಾ ಇರುತ್ತದೆ. ಅಂಥ ರಾಶಿಯವರ ಬಗ್ಗೆ ಇಂದು ನಾವು ಹೇಳಲಿದ್ದೇವೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ತಾಳ್ಮೆ ಹೆಚ್ಚು. ಇವರಿಗೆ ಮನೆಯ ಗೌರವ, ಹಿರಿಯರ ಮೇಲಿನ ಗೌರವದ ಬಗ್ಗೆ, ಸಂಗಾತಿಯ ಮೇಲೆ ಪ್ರೀತಿ, ಕಾಳಜಿ ಎಲ್ಲವೂ ಇರುತ್ತದೆ. ಹಾಗಾಗಿ ಇವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಜಗಳವಾದಾಗ ತಾಳ್ಮೆಯಿಂದ ವರ್ತಿಸುತ್ತಾರೆ. ಜೀವನದಲ್ಲಿ ಎಂಥದ್ದೇ ಸಮಸ್ಯೆ ಬಂದರೂ, ಅದಕ್ಕೆ ಸರಳವಾಗಿ ಪರಿಹಾರ ಹುಡುಕಿ, ಜೀವನ ನಡೆಸಿಕೊಂಡು ಹೋಗುತ್ತಾರೆ.
ಕಟಕ ರಾಶಿ: ಕಟಕ ರಾಶಿಯವರು ತಮ್ಮ ಸಂಗಾತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕಟಕ ರಾಶಿಯವರು, ಎಷ್ಟೇ ಸಿಟ್ಟು ಬಂದರೂ, ಬೇಸರವಾದರೂ, ಸಂಬಂಧವನ್ನು ಗಟ್ಟಿಯಾಗಿ ಇರಿಸಲು, ತಾಳ್ಮೆಯಿಂದ ವರ್ತಿಸುತ್ತಾರೆ. ತಾಳ್ಮೆಗೆಟ್ಟರೆ, ದಂಡಂದಶಗುಣಂ ಎಂಬಂತೆ, ಹೇಗಾದರೂ ಸಂಬಂಧವನ್ನು ಸರಿ ಮಾಡಿಕೊಳ್ಳುತ್ತಾರೆ.
ಮಕರ ರಾಶಿ: ಮಕರ ರಾಶಿಯವರು ಗಂಭೀರ ಸ್ವಭಾವದವರು. ಆದರೆ ಸಂಬಂಧದ ವಿಷಯ ಬಂದರೆ, ಚೆನ್ನಾಗಿ ನಿಭಾಯಿಸುತ್ತಾರೆ. ಸಿಡುಕು ಸ್ವಭಾವದವರಾಾದರೂ, ಕೊನೆಯವರೆಗೂ ಅದನ್ನು ಚೆನ್ನಾಗಿ ನಿಭಾಯಿಸುವ ಅರ್ಹತೆ ಹೊಂದಿರುತ್ತಾರೆ.
ಮೀನ ರಾಶಿ: ಮೀನ ರಾಶಿಯವರು ಸೌಮ್ಯ ಸ್ವಭಾವದವರು. ಹೆಚ್ಚಾಗಿ ಕಲ್ಪನಾಲೋಕದಲ್ಲಿ ತೇಲಾಡುವವರು ಇವರಾಗಿರುವ ಕಾರಣ, ಸಂಗಾತಿಯೊಂದಿಗೆ ಹೊಂದಿಕೊಂಡು ಹೋಗುತ್ತಾರೆ. ಅಲ್ಲದೇ, ತಪ್ಪು ಮಾಡಿದರೆ, ಕ್ಷಮಿಸುವ ಗುಣ ಇವರದ್ದಾಗಿರು ಕಾರಣ, ಜೀವನ ಸಂಗಾತಿಯನ್ನು ಹೆಚ್ಚು ಪ್ರೀತಿಸುವುದಲ್ಲದೇ, ಹೊಂದಿಕೊಂಡು ಹೋಗುತ್ತಾರೆ.




