Sandalwood News: ಗೀತಸಾಹಿತಿ ಕವಿರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಬರೆದ ಮೊದಲ ಹಾಡು, ತಮಗೆ ಸಿಕ್ಕ ಮೊದಲ ಸಂಭಾವನೆ, ಯಾವ ಹಾಡು ಹೇಗೆ ಬರೆದೆ ಎಂದೆಲ್ಲ ಮಾತನಾಡಿದ್ದಾರೆ. ಆಪ್ತಮಿತ್ರ ಸಿನಿಮಾದಲ್ಲಿ ಬರುವ ಗರನೆ ಗರ ಗರನೇ ಎಂಬ ಹಾಡನ್ನು ಬರೆದಿದ್ದು ಇದೇ ಕವಿರಾಜ್. ಇಂದು ಕವಿರಾಜ್ ಈ ಹಾಡು ಹುಟ್ಟಿಕೊಂಡಿದ್ದು ಹೇಗೆ ಅಂತಾ ಹೇಳಿದ್ದಾರೆ.
ಕವಿರಾಜ್ ಅವರು ಬರೆದ ಹಾಡುಗಳನ್ನು ಕೇಳಿದ್ರೆನೇ, ಕವಿರಾಜ್ ಎಂತ ಅತ್ಯದ್ಭುತ ಕನ್ನಡ ಜ್ಞಾನ ಹೊಂದಿದವರು ಅಂತಾ ಗೊತ್ತಾಗುತ್ತದೆ. ಇದನ್ನೆಲ್ಲ ಬರೆಯಲು ಕವಿರಾಜ್ ಅವರಿಗೆ ಎಷ್ಟು ಕಷ್ಟವಾಗಿರಬೇಕು ಅಂತಾ ನಮಗೆಲ್ಲಾ ಅನ್ನಿಸಬಹುದು. ಏಕೆಂದರೆ, ಅದು ನಮಗೆ ಕಷ್ಟದ ಕೆಲಸ, ಅವರಿಗಲ್ಲ. ಅವರೇ ಹೇಳುವ ಪ್ರಕಾರ, ನನಗೆ ಯಾವ ಹಾಡು ಬರೆಯಲೂ ಕಷ್ಟ, ಕಿರಿಕಿರಿ ಎನ್ನಿಸಲಿಲ್ಲ. ಹಾಡು ಕೇಳಿದವರು ಅಲ್ಲಲ್ಲಿ ಚೇಂಜಸ್ ಕೇಳಿದಾಗ, ಅದನ್ನೇ ಅಲ್ಲೇ ಸರಿ ಮಾಡಿ ಕೊಡುತ್ತಿದ್ದೆ ಅಂತಾರೆ ಕವಿರಾಜ್.
ಇನ್ನು ಜೀವನಾನುಭವ ಹೊಂದಿರುವ ಕವಿರಾಜ್ ಹೇಳುವುದು ಏನೆಂದರೆ, ನಮ್ಮ ಜೀವನದ ಅನಿವಾರ್ಯತೆಗಳು ನಮ್ಮನ್ನು ಕೆಲಸ ಮಾಡಲು ತಯಾರು ಮಾಡಿಬಿಡುತ್ತದೆ. ಆದರೆ ಎಲ್ಲದಕ್ಕೂ ತಾಳ್ಮೆ ತುಂಬಾನೇ ಮುಖ್ಯ. ತಾಳ್ಮೆ ಇದ್ದಾಗಲೇ ನಾವು ಸಾಧನೆ ಮಾಡಲು ಸಾಧ್ಯ ಅಂತಾರೆ ಕವಿರಾಜ್.
ಇನ್ನು ಕವಿರಾಜ್ ತುಂಬಾ ವೇಗವಾಗಿ ಬರೆದು ಹಿಟ್ ಆಗಿರುವ ಹಾಡು ಅಂದ್ರೆ, ಈ ಪ್ರೀತಿ ಒಂಥರಾ.. ಕಚಗುಳಿ ಎಂಬ ಹಾಡು. ಇನ್ನು ತುಂಬಾ ಸಮಯ ತೆಗೆದುಕೊಂಡು ಬರೆದು, ಹಿಟ್ ಆಗಿರುವ ಹಾಡು ಅಂದ್ರೆ, ಬಾನಿಂದ ಬಾ ಚಂದಿರ ಹಾಡು.
ಇನ್ನು ಆಪ್ತರಕ್ಷಕ ಸಿನಿಮಾದ ಗರನ ಗರ ಗರನೇ ಹಾಡು ಬರೆಯಲು ಗುರುಕಿರಣ್ ಅವರೇ ಕವಿರಾಜ್ ಅವರಿಗೆ ಹೇಳಿದ್ದರು. ಅಲ್ಲದೇ, ಕವಿರಾಜ್ ಬೇರೆ ವಿಷ್ಣು ಸರ್ ಬಿಗ್ ಫ್ಯಾನ್. ಇವರಿಗೆ ಅತ್ಯದ್ಭುತವಾದ ಹಾಡನ್ನೇ ಬರೆದು ಕೊಡಬೇಕು ಎಂದು ಕವಿರಾಜ್ ಅಂದುಕೊಂಡೇ, ಹಾಡು ಬರೆಯಲು ಶುರು ಮಾಡಿದ್ದರು.
ಈ ಸಿನಿಮಾದಲ್ಲಿ ರಾಜನಾಗಿದ್ದ ವಿಷ್ಣು ದಾದಾ ಬರೀ ಸಂಗೀತಗಾರನಷ್ಟೇ ಅಲ್ಲ, ಸಕಲ ವಾದ್ಯಗಳನ್ನು ನುಡಿಸುವವರಾಗಿದ್ದರು. ಹಾಗಾಗಿ ಅದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಕವಿರಾಜ್ ಹಾಡು ಬರೆದಿದ್ದರು. ಪೂರ್ತಿ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.