Friday, October 18, 2024

Latest Posts

ಬೆಂಗಳೂರಿನಲ್ಲಿರುವ ಬಂಡೆ ಮಹಾಕಾಳಮ್ಮ ದೇವನಸ್ಥಾನದ ವಿಶೇಷತೆಗಳೇನು ಗೊತ್ತಾ..?

- Advertisement -

Spiritual: ಸಿಲಿಕಾನ್ ಸಿಟಿ, ಐಟಿ ಸಿಟಿ, ಗ್ರೀನ್ ಸಿಟಿ, ಉದ್ಯಾನ ನಗರಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಅನೇಕ ಪ್ರವಾಸಿ ಸ್ಥಳಗಳಿದೆ. ಇಲ್ಲಿಗೆ ಬಂದರೆ, ನೀವು ತರಹೇವಾರಿ, ಹೊಟೇಲ್, ಪಾರ್ಕ್, ಮಾಲ್‌ಗಳಿಗೆ ಹೋಗಬಹುದು. ವಿಧಾನಸೌಧ, ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿ ಹಲವು ಸ್ಥಳಗಳಿಗೆ ಹೋಗಬಹುದು. ಅದೇ ರೀತಿ ಇಲ್ಲಿ ಫುಡ್ ಸ್ಟ್ರೀಟ್‌ಗಳಿಗೆ ಏನೂ ಕೊರತೆ ಇಲ್ಲ. ಆದರೆ ಕೆಲವರ ಪ್ರಕಾರ, ಬೆಂಗಳೂರಿನಲ್ಲಿ ಭಕ್ತಿಯಿರುವ ದೇವಸ್ಥಾನಗಳಿರುವುದು ಕಡಿಮೆ ಅಂತ. ಆದರೆ ಭಕ್ತಿಯಿಂದ ಹೋದರೆ, ನಿಮ್ಮೆಲ್ಲ ಕಷ್ಟಗಳಿಗೂ ಪರಿಹಾರ ಕೊಡುವ ಹಲವು ದೇವಸ್ಥಾನಗಳು ಬೆಂಗಳೂರಿನಲ್ಲಿ ಇದೆ. ಅಂಥ ದೇವಸ್ಥಾನಗಳಲ್ಲಿ ಬಂಡೆ ಮಹಾಕಾಳಮ್ಮ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಬಂಡೆಯಲ್ಲಿ ದೇವಿ ಮೂಡಿ ಬಂದ ಕಾರಣ ಈಕೆಯನ್ನು ಬಂಡೆ ಮಹಾಕಾಳಮ್ಮ ಅಂತಾ ಕರೆಯಲಾಗುತ್ತದೆ. ಮಹಾಕಾಳಿ ಅಂದ್ರೆ ರೌದ್ರ ರೂಪದವಳು. ಆದರೆ ಇಲ್ಲಿ ಮಹಾಕಾಳಿ ಸೌಮ್ಯ ರೂಪದಲ್ಲಿದ್ದಾಳೆ. ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯಲ್ಲಿ ಈ ದೇವಸ್ಥಾನವಿದ್ದು, ನೀವು ದೇವಿಯ ದರ್ಶನ ಮಾಡಬೇಕು ಎಂದಲ್ಲಿ, ಬೆಟ್ಟವನ್ನೇರಿ ಹೋಗಬೇಕಾಗುತ್ತದೆ.

ನಂಜಮ್ಮ ಎಂಬುವವಳು ಕುರಿ ಮೇಯಿಸಲು ಬಂದಾಗ, ಈ ಬಂಡೆಯಿಂದ ಒಂದು ಅಶರೀರವಾಣಿ ಕೇಳಿಬರುತ್ತದೆ. ತಾನು ಮಹಾಕಾಳಮ್ಮ, ನಾನು ಈ ಬಂಡೆಯಲ್ಲಿ ನೆಲೆನಿಂತಿದ್ದು, ನನಗೆ ಪ್ರತಿದಿನ ಪೂಜಾ ಕೈಂಕರ್‌ಯ ನಡೆಯಬೇಕು ಎಂದು ಹೇಳುತ್ತಾಳೆ. ಮೊದ ಮೊದಲು ಇದನ್ನು ಕಡೆಗಣಿಸಿದ್ದ ನಂಜಮ್ಮ, ಬಳಿಕ ಇದು ದೇವಿಯ ಧ್ವನಿಯೇ ಇರಬೇಕು ಎಂದು, ಊರ ಹಿರಿಯರ ಬಳಿ ಹೇಳುತ್ತಾಳೆ.

ಎಲ್ಲರೂ ಬಂದು ಬಂಡೆಯನ್ನು ಪರೀಕ್ಷಿಸಿದಾಗ, ಅದರಲ್ಲಿ ಮಹಾಕಾಳಿ ರೂಪ ಮೂಡಿ ಬಂದಿರುತ್ತದೆ. ಬಳಿಕ, ಅದಕ್ಕೆ ಪ್ರತೀ ದಿನ ಪೂಜೆ ನಡೆಸಲಾಗುತ್ತದೆ. ಕ್ರಮೇಣ ದೇವಸ್ಥಾನವನ್ನೂ ಕಟ್ಟಿ, ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಿಯಲ್ಲಿ ಬರುವ ಭಕ್ತರ ಬಾಳಲ್ಲಿ ಎಲ್ಲವೂ ಪವಾಡದಂತ ಘಟನೆಗಳು ನಡೆಯುತ್ತದೆ. ಎಂದೂ ನಡೆಯುವುದೇ ಇಲ್ಲವೆಂಬ ಕೆಲಸಗಳು ಪೂರ್ಣಗೊಳ್ಳುತ್ತದೆ. ಅನಾರೋಗ್ಯ ಪೀಡಿತರು ಆರೋಗ್ಯವಾಗಿ ತಿರುಗಾಡುತ್ತಾರೆ. ಹೀಗೆ ದೇವಿಯ ಪವಾಡದಿಂದ, ಇಲ್ಲಿಯ ದೇವಿಯ ಪ್ರಸಿದ್ಧಿ ಹೆಚ್ಚಾಗುತ್ತದೆ.

ಇಂದಿಗೂ ಇಲ್ಲಿ ಬರುವ ಕೆಲ ಭಕ್ತರು, ನಾನು ಮೊದಲು ಹಾಗೆ ಸುಮ್ಮನೆ ನೋಡೋಣ ಅಂತ ಬಂದೆ, ಇಲ್ಲಿ ಬಂದು ಬೇಡಿಕೊಂಡ ಬಳಿಕ, ನನ್ನ ಕೋರಿಕೆಗಳು ಕೆಲವೇ ದಿನಗಳ್ಲಲಿ ಪೂರ್ಣಗೊಂಡವು. ಹಾಗಾಗಿ ನಾನು ದೇವಿಯ ಭಕ್ತೆಯಾದ. ಹಲವು ಬಾರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಶುಕ್ರವಾರ, ಮಂಗಳವಾರ, ಹುಣ್ಣಿಮೆ, ಅಮವಾಸ್ಯೆ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ.

ಕಂಕಣಭಾಗ್ಯ ಕೂಡಿ ಬರಬೇಕು, ಮಾಟ ಮಂತ್ರ ಸಮಸ್ಯೆ ನಿವಾರಣೆಯಾಗಬೇಕು. ಅನಾರೋಗ್ಯದಿಂದ ಮುಕ್ತಿ ಹೊಂದಬೇಕು, ಪತಿಯ ಆರೋಗ್ಯ ಸುಧಾರಿಸಬೇಕು, ಸಂತಾ ಭಾಗ್ಯ ಹೀಗೆ ಹಲವು ಕೋರಿಕೆಗಳನ್ನು ಈಡೇರಿಸಿಕೊಳ್ಳಲು, ಈ ತಾಯಿಯ ಬಳಿ ಭಕ್ತರು ಭಕ್ತಿಯಿಂದ ಬರುತ್ತಾರೆ.

- Advertisement -

Latest Posts

Don't Miss