- Advertisement -
Chikkodi News: ಚಿಕ್ಕೋಡಿ: ಕೃಷ್ಣಾ ನದಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಡ್ರೋನ್ ಕ್ಯಾಮೆರಾದಲ್ಲಿ ಪ್ರವಾಹದ ಭೀಕರತೆ ಸೆರೆಯಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ನಗರಕ್ಕೆ ನೀರು ನುಗ್ಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಕೃಷ್ಣಾ ನದಿ ನೀರು ಸಾಂಗ್ಲಿ ಮುಖಾಂತರ, ಕರ್ನಾಟಕಕ್ಕೆ ಬರುತ್ತದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿರುವ ಎರಡೂ ರಾಜ್ಯಗಳು ಜನರು ಮನೆಗೆ ನೀರು ನುಗ್ಗುವ ಆಂತಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ಕೃಷ್ಣಾ ನದಿಯಲ್ಲಿ 2 ಲಕ್ಷದ 52 ಸಾವಿರಕ್ಕಿಂತ ಕ್ಯೂಸೆಕ್ ಒಳ ಹರಿವು ಆಗಿದ್ದು, ಮೂರು ಲಕ್ಷ ಕ್ಯೂಸೆಕ್ ಒಳಹರಿವು ದಾಟಿದರೆ ನದಿ ದಂಡೆಯ ಹಲವು ಗ್ರಾಮಗಳು ಜಲಾವೃತವಾಗಲಿದೆ. ಹಾಗಾಗಿ ಬೆಳಗಾವಿ ಜಿಲ್ಲಾ ಆಡಳಿತ, ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.
- Advertisement -