Political News: ಚಾಮರಾಜನಗರ ಸಂಸದ ಸುನೀಲ್ ಬೋಸ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ, ಸವಿತಾ ಅವರ ಹಣೆಗೆ ಕುಂಕುಮ ಹಚ್ಚಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಷಾಢ ಮಾಸದ ಮೂರನೇ ಶುಕ್ರವಾರದಂದು ಸುನೀಲ್ ಬೋಸ್ ಮತ್ತು ನಿರ್ದೇಶಕಿ ಸವಿತಾ ಅವರ ಹಣೆಗೆ ಬೊಟ್ಟು ಇಟ್ಟಿದ್ದಾರೆ. ಇನ್ನು ಸಂಸದರು ಓರ್ವ ಹೆಣ್ಣಿಗೆ ಬೊಟ್ಟಿಟ್ಟ ಸುದ್ದಿ ಯಾಕಿಷ್ಟು ಸದ್ದಾಗುತ್ತಿದೆ ಎಂದರೆ, ಲೋಕಸಭೆ ಚುನಾವಣೆಗೆ ಅಫಿಡವಿಟ್ ಸಲ್ಲಿಸುವ ವೇಳೆ ಬೋಸ್, ತಾವು ಅವಿವಾಹಿತ ಎಂದು ಹೇಳಿದ್ದರು. ಈ ಕಾರಣಕ್ಕೆ ಬಿಜೆಪಿಗರು, ಸುನೀಲ್ ವಿರುದ್ಧ ಚುನಾವಣಾ ಪ್ರಾಧಿಕಾರಕ್ಕೆ ದೂರು ನೀಡಿ, ಸವಿತಾ ಮತ್ತು ಸುನೀಲ್ ಒಟ್ಟಿಗೆ ಇರುವ ಫೋಟೋ ತೋರಿಸಿ, ಸುನೀಲ್ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ವಿವಾಹವಾಗಿದೆ ಎಂದು ಹೇಳಿದ್ದರು.
ಇದಕ್ಕೆ ತಕ್ಕಂತೆ, ಇಂದು ಈ ಫೋಟೋ ವೈರಲ್ ಆಗಿದ್ದು, ಮದುವೆ ಆಗಿದ್ದರೆ, ಮದುವೆ ಆಗಿದೆ ಎಂದು ಒಪ್ಪಿಕೊಳ್ಳಲಿ, ಸುಳ್ಳು ಹೇಳುವ ಅವಶ್ಯಕತೆ ಏನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಸಂಸದ ಸುನೀಲ್ ಬೋಸ್ ತಂದೆ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಹಣೆಗೆ ಬೊಟ್ಟು ಇಡೋದ್ರಲ್ಲಿ ತಪ್ಪೇನಿದೆ..? ಯಾರು ಬೇಕಾದ್ರೂ ಹಣೆಗೆ ಬೊಟ್ಟಿಡಬಹುದು. ಅದು ಹಿಂದೂಗಳ ಸಂಪ್ರದಾಯ. ಹೆಣ್ಣು ಗಂಡಿನಲ್ಲಿ ಸಮಾನತೆ ಇದೆ. ಮಗ ಮಾಡಿದ್ದರಲ್ಲೇನು ತಪ್ಪಿಲ್ಲ ಎನ್ನುವ ರೀತಿ ಮಹದೇವಪ್ಪ ಸಮಜಾಯಿಷಿ ನೀಡಿದ್ದಾರೆ.