Movie News: ರಾಹುಲ್ ಗಾಂಧಿ ಸಂಸತ್ತಿಗೆ ಬರುವಾಗ, ಕುಡಿದವರ ಥರ ಕಾಣಿಸುತ್ತಾರೆ, ಡ್ರಗ್ಸ್ ತೆಗೆದುಕೊಂಡವರ ಥರ ಕಾಣಿಸುತ್ತಾರೆ. ಅವರು ಮದ್ಯ ಸೇವಿಸಿದ್ದಾರೋ ಇಲ್ಲವೋ ಅನ್ನೋದನ್ನ ಮೊದಲು ಪರೀಕ್ಷೆ ಮಾಡಿಸಿ, ಬಳಿಕ, ಅವರನ್ನು ಸಂಸತ್ತಿನೊಳಗೆ ಬಿಡಬೇಕು ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.
ಸಂಸತ್ ಅಧಿವೇಶನ ಶುರುವಾದಾಗಿನಿಂದ ರಾಹುಲ್ ಗಾಂಧಿ ಪ್ರತಿದಿನ ಒಂದಲ್ಲ ಒಂದು ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ. ತಮಗೆ ನಿರ್ಮಲಾ ಸೀತಾರಾಮನ್ ಬಜೆಟ್ ದಿನ ಹಲ್ವಾ ನೀಡಿಲ್ಲವೆಂದು ಹಾಸ್ಯಾಸ್ಪದ ಹೇಳಿಕೆ ಕೊಟ್ಟಿದ್ದ ರಾಹುಲ್ ಮಾತಿಗೆ, ವಿತ್ತ ಸಚಿವೆ ತಲೆ ಚಚ್ಚಿಕೊಂಡಿದ್ದರು.
ಅದಕ್ಕೂ ಮುನ್ನ ಶಿವನ ಫೋಟೋ ತೋರಿಸಿ, ಹಿಂದೂಗಳು ಹಿಂಸಾತ್ಮಕವಾಗಿ ವರ್ತಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಕಾರಣಕ್ಕೆ ಹಲವು ಹಿಂದೂ ಸಂಘಟನೆಗಳು ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವು ಹಿಂದೂಗಳು, ದೇವಸ್ಥಾನಕ್ಕೆ ಹೋಗಿ, ರಾಹುಲ್ ಗಾಂಧಿಯ ಈ ಹೇಳಿಕೆಗೆ ತಕ್ಕ ಶಿಕ್ಷೆ ನೀಡು ಎಂದು ದೇವರಲ್ಲಿ ಬೇಡಿದ್ದರು.
ಇನ್ನು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಇಲ್ಲಸಲ್ಲದ್ದನ್ನು ಹೇಳುತ್ತಿದ್ದು, ಈ ಬಗ್ಗೆ ಕಿಡಿಕಾರಿರುವ ಕಂಗನಾ, ಡ್ರಗ್ಸ್ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ, ಸಂಸತ್ತಿನ ನೀತಿ, ನಿಯಮಗಳೇನು ಅಂತಾ ನಿಮಗೆ ಗೊತ್ತಿಲ್ಲವಾ..? ಪ್ರಧಾನಿ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದೀರಿ..? ನಾನು ಹೊಸಬಳು. ಆದರೂ ಕೂಡ ನಾನು ಸಂಸತ್ತಿನ ನೀತಿ, ನಿಯಮಗಳನ್ನು ತಿಳಿದುಕೊಂಡಿದ್ದೇನೆ. ಆದರೆ ನೀವು ಎಷ್ಟೋ ವರ್ಷದಿಂದ ಸಂಸತ್ತಿಗೆ ಬರುತ್ತಿದ್ದೀರಿ. ನಿಮಗೆ ಈ ಬಗ್ಗೆ ಅರಿವಿಲ್ಲದಿರುವುದು ವಿಪರ್ಯಾಸ ಎಂದು ಕಂಗನಾ ಹೇಳಿದ್ದಾರೆ.




