ಫುಡ್‌ ಪಾಯ್ಸನ್‌ನಿಂದ ಹಾಸಿಗೆ ಹಿಡಿದ ನಟಿ, ಭಾವಿ ಅತ್ತೆಯಿಂದ ಆರೈಕೆ.

Bollywood News: ಕೆಲ ದಿನಗಳ ಹಿಂದಷ್ಟೇ ಸಖತ್ ಸದ್ದು ಮಾಡಿದ್ದ ಸುದ್ದಿ ಅಂದ್ರೆ, ಅಂಬಾನಿ ಮನೆ ಮದುವೆ ಸುದ್ದಿ. ಆದರೆ ಕೆಲವು ತಪ್ಪು ತಿಳುವಳಿಕೆಯಿಂದ ಓರ್ವ ನಟಿ, ಅಂಬಾನಿ ಮದುವೆಯಲ್ಲಿ ಊಟ ಮಾಡಿ, ಫುಡ್‌ ಪಾಯ್ಸನ್ ಆಗಿ, ಆಸ್ಪತ್ರೆ ಸೇರಿದ್ದಳು ಅಂತಾ ಸುದ್ದಿಯಾಗಿತ್ತು. ಆದರೆ, ನಟಿ ಅಪ್ಪ, ಆಕೆ ಅಂಬಾನಿ ಮದುವೆಯಲ್ಲಿ ಊಟ ಮಾಡಿ, ಆಕೆಗೆ ಫುಡ್ ಪಾಯ್ಸನ್ ಆಗಿದ್ದಲ್ಲ. ಬದಲಾಗಿ, ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅಲ್ಲಿ ತಿಂದ ಊಟದಿಂದ ಫುಡ್ ಪಾಯ್ಸನ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಫುಡ್‌ ಪಾಯ್‌ಸನ್‌ನಿಂದ ಹಾಸಿಗೆ ಹಿಡಿದಿರುವ ನಟಿಗೆ ಆಕೆಯ ಭಾವಿ ಅತ್ತೆ ಆರೈಕೆ ಮಾಡುತ್ತಿದ್ದಾರಂತೆ. ಅಷ್ಟಕ್ಕೂ ಆ ನಟಿ ಯಾರು ಅಂದ್ರೆ, ದಿ. ಹಿರಿಯ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್. ಜಾಹ್ನವಿ ಅಂಬಾನಿ ಮನೆ ಮದುವೆಯಲ್ಲಿ ಸಖತ್ ಎಂಜಾಯ್ ಮಾಡಿದ್ದರು. ಇವರೊಂದಿಗೆ ಇವರ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಕೂಡ ಭಾಗಿಯಾಗಿದ್ದರು.

ಆದರೆ ಜಾಹ್ನವಿ ಈ ಕಾರ್ಯಕ್ರಮದ ಬಳಿಕ ವಿಮಾನದಲ್ಲಿ ಪ್ರಯಾಣಿಸುವಾಗ, ಅಲ್ಲಿನ ಆಹಾರ ಸೇವಿಸಿ ಅನಾರೋಗ್ಯಕ್ಕೀಡಾಗಿದ್ದಾರೆ. ಹಾಗಾಗಿ ಸದ್ಯ ಜಾಹ್ನವಿ ಕಪೂರ್ ಭಾವಿ ಅತ್ತೆ, ಅಂದ್ರೆ ಶಿಖರ್ ಅಮ್ಮ ಸ್ಮೃತಿ , ಜಾಹ್ನವಿಯ ಆರೈಕೆ ಮಾಡುತ್ತಿದ್ದಾರಂತೆ.

ಶಿಖರ್ ಪಹಾರಿಯಾ ರಾಜಕಾರಣಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಅವರಿಗೆ ಮೂವರು ಪುತ್ರಿಯರಿದ್ದು, ಅದರಲ್ಲಿ ಸ್ಮೃತಿ ಅವರ ಪುತ್ರ ಶಿಖರ್ ಪಹಾರಿಯಾ. ಶಿಖರ್ ಮತ್ತು ಜಾಹ್ನವಿ ತಿರುಪತಿ, ಉಜ್ಜಯಿನಿಯಂಥ ಪವಿತ್ರ ಸ್ಥಳಕ್ಕೆ ಹೋಗಿ, ದೇವರಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಅಲ್ಲದೇ, ವಿದೇಶ ಪ್ರಯಾಣವನ್ನೂ ಮಾಡಿದ್ದಾರೆ. ಹಾಗಾಗಿ ಜಾಹ್ನವಿ ಮತ್ತು ಶಿಖರ್ ವಿವಾಹವಾಗುವುದು ನಿಶ್ಚಿತ ಅನ್ನೋ ಸುದ್ದಿ ಕೇಳಿ ಬರುತ್ತಿದೆ.

About The Author