Hubli News: ಅದು ಥೇಟ್ ಸಿನೆಮಾ ಸ್ಟೈಲ್ ರೀತಿಯ ಘಟನೆ..ಅಲ್ಲಿ ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದು ಸತ್ತು ಎರಡು ದಿನ ಆದರೂ ಮೆಡಿಸಿನ್ ಮತ್ತು ಬಿಲ್ ಕಟ್ಟಿಸಿಕೊಂಡಿದ್ದಾರೆ ಎಂದು ಮೃತಳ ಕಡೆಯವರು ವಿಹಾನ ಆಸ್ಪತ್ರೆ ಮೇಲೆ ಆರೋಪ ಮಾಡಿದ್ದಾರೆ.
ನಗರದಲ್ಲಿ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಹೆಸರಿನ ಹೃದಯ ಸಂಬಂಧಿ ಖಾಯಿಲೆ ಸ್ಪೆಶಲ್ ಆಸ್ಪತ್ರೆ ಇದೆ ಹೀಗಾಗಿ ಕಳೆದ 10 ದಿನಗಳ ಹಿಂದೆ ಹುಬ್ಬಳ್ಳಿಯ ವಿದ್ಯಾನಗರದ ವಿಹಾನ್ ಆಸ್ಪತ್ರೆಗೆ ಆಪ್ರೀನ್ ಎನ್ನುವವರನ್ನು ಕರೆತರಲಾಗಿತ್ತು.
24 ವರ್ಷದ ಆಪ್ರಿನ್ ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ಶುರು ಮಾಡಿದ್ದರಂತೆ. ಆದ್ರೆ, ಪ್ರತಿ ದಿನ ಎಲ್ಲವೂ ಸರಿ ಇತ್ತು ಆದರೆ 8 ನೇ ದಿನವೇ ಅವಳು ತೀರಿ ಹೋಗಿದ್ದಾಳೆ ನಂತರ ಕುಟುಂಬಸ್ಥರು ಕೇಳಿದಾಗ ಹೃದಯದ ಬಡಿತ ನಿಂತಿದೆ ನೋಡಿ ಎಂದರು ಕೂಡ ಕಳೆದ 2 ದಿನಗಳಿಂದ ಐಸಿಯು ಚಿಕಿತ್ಸೆ ಎಂದು ಯಾರನ್ನು ಅವಳ ಹತ್ತಿರ ಬಿಡದೆ ಚಿಕಿತ್ಸೆ ಕೊಡ್ತಾ ಇದ್ದೀವಿ ಅಂತ ಹೇಳಿ ಇವತ್ತಿನ ವರೆಗೂ ಸುಮಾರು 3 ಲಕ್ಷ ತುಂಬಿಸಿಕೊಂಡು ಇವತ್ತು ಮಗಳನ್ನ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀವಿ ಅಂದಾಗ ನಿಮ್ಮ ಮಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ ಎಂದು ಆಸ್ಪತ್ರೆಯವರು ಹೇಳ್ತಿದ್ದಾರೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಳಿಕ, ಮೃತನ ಕಡೆಯವರಿಂದ ಆಸ್ಪತ್ರೆಯಲ್ಲಿ ದೊಡ್ಡ ಗಲಾಟೆಯೇ ಮಾಡಿದ್ದಾರೆ. ಹೌದು, ಸಾವು ಎನ್ನುವುದು ಎಂಥವರನ್ನಾದರೂ ಕೆರಳಿಸಿ ಬಿಡತ್ತೆ. ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ರೆ, ಇಲ್ಲ ತಡವಾಗಿ ಚಿಕಿತ್ಸೆ ನೀಡಿದ್ದರಿಂದ ಸಾವಾದ್ರೆ ಆಕ್ರೋಶ ಹೊರ ಹಾಕೋದು ಸಾಮಾನ್ಯ ಆದರೆ ಖಾಸಗಿ ಆಸ್ಪತ್ರೆಯ ಈ ದುಡ್ಡಿನ ದಾಹ ಇದೆ ಅಲ್ಲ ಅದು ಬಡವರ ರಕ್ತವನ್ನ ಹಿರಿದ್ದು ಅಷ್ಟೇ ಅಲ್ಲದೆ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾರೆ.
ಒಟ್ಟಾರೆ ಆಗಿ ಖಾಸಗಿ ಆಸ್ಪತ್ರೆಯ ಈ ದುರ್ವರ್ತನೆಗೆ ಜನ ಬೇಸತ್ತು ನುಂಗಕ್ಕೂ ಬಾರದೆ ಉಗಳಕ್ಕೂ ಬಾರದೆ ಸಾವು ನೋವು ಅನುಭವಿಸಿ ಗಂಟು ಕಟ್ಟಿಕೊಂಡು ಮನೆ ಕಡೆ ಹೋಗುತ್ತಿದ್ದಾರೆ.
ಇದಕ್ಕೆಲ್ಲ ಅಂದರೆ ಖಾಸಗಿ ಆಸ್ಪತ್ರೆಗಳ ಮೇಲೆ ಸ್ಥಳೀಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಜನರ ಕಣ್ಣೀರು ಯಾವಾಗ ಒರೆಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.




