Hubli News: ಹುಬ್ಬಳ್ಳಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್ ಬೆಂಗಳೂರು ಸೆಂಟ್ರಲ್ ಜೈಲು ಸೇರಿದ್ದಾರೆ. ನಟ ದರ್ಶನ್ ಹುಬ್ಬಳ್ಳಿಗೆ ಹೋದಾಗ ಅಲ್ಲಿನ ಶ್ರೀ ಸಿದ್ಧರೂಢ ಮಠಕ್ಕೆ ಕೆಲವು ಭಾರಿ ಭೇಟಿ ನೀಡಿದ್ದರು. ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆಯುತ್ತಿದ್ದರು. ಇದೀಗ ಇದೇ ಮಠದ ಪ್ರಸಾದ ಮತ್ತು ಕೃತಿ ಕೋರಿಯರ್ ಮೂಲಕ ಜೈಲಿಗೆ ಕಳಹಿಸಲಾಗಿದೆ.
ಹೌದು, ಕೊಲೆ ಆರೋಪಿಯಾಗಿ ಸುಮಾರು 50 ದಿನಗಳಿಂದ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್‌ಗೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಅಜ್ಜನ ಚರಿತ್ರೆಯ ಕೃತಿಯನ್ನು ಶ್ರೀಮಠದ ಧರ್ಮದರ್ಶಿ ಡಾ.ಗೋವಿಂದ ಮಣ್ಣೂರ ವೈಯಕ್ತಿಕವಾಗಿ ಕಳುಹಿಸಿಕೊಟ್ಟಿದ್ದಾರೆ.
ಕೃತಿ-ಪ್ರಸಾದ ಕೋರಿಯರ್ ಮಾಡಿದ್ದೇಕೆ?
ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಈ ಹಿಂದೆ ತಮಗೆ ಓದಲು ಪುಸ್ತಕಗಳ ವ್ಯವಸ್ಥೆ ಮಾಡಿ ಎಂದು ಜೈಲಧಿಕಾರಿಗಳಿಗೆ ಮನವಿ ಮಾಡಿದ್ದರು. ಜೈಲಲ್ಲಿರುವ ಕಾರಣ ಅವರ ಆತ್ಮಬಲ ಕುಸಿದಿದೆ. ಹೀಗಾಗಿ ನಾನು ಶ್ರೀ ಸಿದ್ಧಾರೂಢ ಅಜ್ಜನ ಚರಿತ್ರೆಯ ಕೃತಿ ಮತ್ತು ಪ್ರಸಾದವನ್ನು ಜೈಲಿಗೆ ಕೋರಿಯರ್ ಮಾಡಿದ್ದೇನೆ ಎಂದು ಧರ್ಮದರ್ಶಿಗಳು ತಿಳಿಸಿದ್ದಾರೆ.
ನಟ ದರ್ಶನ್ ಅವರಿಗೆ ಆಧ್ಯಾತ್ಮಿಕ ಬಲ ಬರಲಿ ಎಂಬುದೇ ನನ್ನ ಆಶಯದಿಂದ ಅವರಿಗೆ ಈ ಪುಸ್ತಕವನ್ನು ವೈಯಕ್ತಿಕವಾಗಿ ಕಳುಹಿಸಿಕೊಟ್ಟಿದ್ದೇನೆ ಎಂದರು. ಅಲ್ಲದೇ ಈ ಹಿಂದೆ ನಟ ದರ್ಶನ್ ಹುಬ್ಬಳ್ಳಿಗೆ ಬಂದಾಗ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದ ಫೋಟೋ ಅವರು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಅವರ ಅಭಿಮಾನಿಗಳು, ಆಪ್ತರು, ಸ್ನೇಹಿತರು ,ಕುಟುಂಬಸ್ಥರು ಅವರನ್ನು ನೋಡಲು ಧಾವಿಸುತ್ತಿರುವುದು ಸಾಮಾನ್ಯವಾಗಿದೆ. ಜೈಲು ಸೇರಿದ ಕೆಲವು ದಿನಗಳ ಬಳಿಕ ನಟ ದರ್ಶನ್ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಜೈಲಾಧಿಕಾರಿಗಳ ಬಳಿ ಪುಸ್ತಕಕ್ಕೆ ಬೇಡಿಕೆ ಇಟ್ಟಿದ್ದರು.
ಅಲ್ಕೆಮಿಸ್ಟ್’, ‘ರಸವಾದಿ’ ಬಳಿಕ ‘ಸಿದ್ಧಾರೂಢದ ಚರಿತ್ರೆ’ ಕೃತಿ
ದರ್ಶನ್ ಆಪ್ತ ಮತ್ತು ನಿರ್ದೇಶಕ ತರುಣ್ ಸುದೀರ್ ಅವರು, ನಟ ದರ್ಶನ್‌ಗೆ ಎರಡು ಪುಸ್ತಕಗಳು ನೀಡಿದ್ದಾರೆ. ಅದರಲ್ಲಿ ಒಂದು ‘ಅರ್ಜುನ್’ ಹಾಗೂ ಇನ್ನೊಂದು ‘ಅಲ್ಕೆಮಿಸ್ಟ್’ ಕನ್ನಡ ವರ್ಷನ್. ಈ ಪುಸ್ತಕಗಳ ವಿಶೇಷತೆ ಏನೆಂದು ನೋಡುವುದದರೆ, ಅರ್ಜುನ್ ಅನ್ನೋದು ಪ್ರಾಣಿಗಳಲ್ಲೇ ಅತ್ಯಂತ ಪ್ರಮುಖವಾದ ಆನೆಗೆ ಸಂಬಂಧಿಸಿದ್ದು, ಹೀಗಾಗಿ ಈಗಾಗಲೇ ಪ್ರಾಣಿಗಳನ್ನು ಅದರಲ್ಲೂ ಆನೆಯನ್ನು ದತ್ತುಪಡೆದಿರೋ ದರ್ಶನ್ ಗೆ ಈ ಪುಸ್ತಕವನ್ನು ಗಿಫ್ಟ್ ನೀಡಲಾಗಿದೆ.
ಅಲ್ಕೆಮಿಸ್ಟ್’ ಈ ಕಾದಂಬರಿಯನ್ನು ಪೋರ್ಚುಗೀಸ್ ಲೇಖಕ ಪಾವ್ಲೋ ಕೋಯ್ಲೋ 1988 ರಲ್ಲಿ ಬರೆದಿದ್ದು, ಓದುಗರನ್ನು ಆಕರ್ಷಿಸಿದೆ. ವಿಶ್ವದ ಸಾಕಷ್ಟು ಭಾಷೆಗಳಲ್ಲಿ ಈ ಕೃತ ಅನುವಾದಗೊಂಡಿದೆ. ಕನ್ನಡದಲ್ಲೂ ಆಲ್ ಕೆಮಿಸ್ಟ್ ಕೃತಿ ‘ರಸವಾದಿ’ ಶಿರ್ಷಿಕೆಯಡಿ ಅನುವಾದಗೊಂಡಿದೆ. ಇದನ್ನು ಕನ್ನಡಕ್ಕೆ ಅಬ್ದುಲ್ ರಹೀಮ್ ಅನುವಾದಿಸಿದ್ದು, ಈ ಕೃತಿಯನ್ನು ದರ್ಶನ್ ಕೈಸೇರಿದ್ದವು.
ಇನ್ನೆರಡು ದಿನಗಳಲ್ಲಿ ನಟ ದರ್ಶನ್‌ಗೆ ಇವೆರೆಡು ಪುಸ್ತಕದ ಜೊತೆಗೆ ಆಧ್ಯಾತ್ಮಕ್ಕೆ ಸಂಬಂಧಿಸಿದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢದ ಚರಿತ್ರೆ ಕುರಿತ ಕೃತಿ ಕೈ ಸೇರಲಿದೆ.