ಕರ್ನಾಟಕ ಟಿವಿ : ವಿವಾದಾತ್ಮಕ ನಿರ್ದೇಶಕ ಅಂತಲೇ ಗುರುತಿಸಿಕೊಂಡಿರುವ ನಿರ್ದೇಶಕ ಆರ್ ಜಿವಿ ಇದೀಗ ತಮ್ಮ ಹೊಸ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ.. ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರವನ್ನ ಅನೌನ್ಸ್ ಮಾಡಿದ್ದು, ಅದಕ್ಕೆ ಪವರ್ ಸ್ಟಾರ್ ಅನ್ನೋ ಟೈಟಲ್ ಇಟ್ಡಿದ್ದಾರೆ.. ಈ ಟೈಟಲ್ ಕೇಳಿದ್ರೆ ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸ್ತಿದ್ದಾರಾ ಅನ್ನೋ ಕುತೂಹಲ ಮೂಡೋದು ಸಹಜ.. ಟ್ವಿಟ್ಟರ್ ನಲ್ಲಿ ತಮ್ಮ ಈ ಚಿತ್ರದ ಬಗ್ಗೆ ತಿಳಿಸಿರುವ ವರ್ಮಾ, ಅದ್ರ ಜೊತೆಗೆ ಇವರೇ ನಮ್ಮ ಚಿತ್ರದ ನಟ ಅಂತ ಹೇಳಿ ಒಂದು ವೀಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ.. ಈ ವೀಡಿಯೋದಲ್ಲಿರುವ ನಟ ಕೂಡ ನಟ ಪವನ್ ಕಲ್ಯಾಣ್ ಅವರನ್ನೇ ಹೋಲುತ್ತಿದ್ದಾರೆ.. ಅದು ಸಿನಿಪ್ರಿಯರ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ.. ಆದ್ರೆ ಅವರು ಪವನ್ ಕಲ್ಯಾಣ್ ಅಲ್ಲ ಅನ್ನೋದನ್ನ ವರ್ಮಾ ಇನ್ ಡೈರೆಕ್ಟ್ ಆಗಿ ಹೇಳಿ ತಮ್ಮ ಸಿನಿಮಾ ಬಗ್ಗೆ ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದಾರೆ.. ಇತ್ತ ನಟ ಪವನ್ ಕಲ್ಯಾಣ್ ಆಗ್ಲಿ ಅಥವಾ ಮೆಗಾ ಸ್ಟಾರ್ ಕುಟುಂಬದವರಾಗ್ಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಹೀಗಾಗಿ ವರ್ಮಾ ಸಿನಿಮಾ ಚಿತ್ರ ರಸಿಕರಲ್ಲಿ ಸಾಕಷ್ಟು ಕುತೂಹಲ ಉಂಟು ಮಾಡಿದೆ..
ಚಂದನ, ಸಿನಿಮಾ ಬ್ಯುರೋ, ಕರ್ನಾಟಕ ಟಿವಿ
