Hubli News: ಹುಬ್ಬಳ್ಳಿ: ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಶಿರಡಿ ನಗರದಲ್ಲಿ ನಡೆದಿದೆ.
ಶಿರಡಿ ನಗರದ ನಿವಾಸಿ ವಿನಾಯಕ ಮೂಳ್ಳೊಳಿ ಶವವಾಗಿ ಪತ್ತೆಯಾಗಿದ್ದಾರೆ. ವಿನಾಯಕ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸಂಜೆ ಹೊತ್ತಿಗೆ ಶಿರಡಿ ನಗರ ಸೇರಿ ಉಣಕಲ್ ಕ್ರಾಸ್ನಲ್ಲಿ ಓಡಾಡಿದ್ದಾರೆ. ಆದ್ರೆ ರಾತ್ರಿ ವೇಳೆ ಏಕಾಏಕಿ ನೇಣು ಬಿಗಿದ ಸ್ಥಿತಿಯಲ್ಲಿ ವಿನಾಯಕನ ಮೃತದೇಹ ಪತ್ತೆಯಾಗಿದೆ.
ಒಬ್ಬಂಟಿಯಾಗಿದ್ದು, ಅಮ್ಮನ ನೆನಪು ಕಾಡುತ್ತಿದ್ದ ಕಾರಣಕ್ಕೆ ವಿನಾಯಕ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ. ಇತ್ತೀಚೆಗೆ ಮನೆಯ ಬಳಿ ನಡೆದ ಅಪಘಾತದಲ್ಲಿ ವಿನಾಯಕ ಅವರ ತಾಯಿ ಬಸಪ್ಪ ಸಾವನ್ನನಪ್ಪಿದ್ದರು. ಅಲ್ಲದೇ, ಕಳೆದ ಕೆಲ ದಿನಗಳ ಹಿಂದೆ, ವಿನಾಯಕ ಮತ್ತು ಅವರ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ವಿನಾಯಕ ಮೊಬೈಲ್ ಕಳೆದುಕೊಂಡಿದ್ದರು. ಇವೆಲ್ಲ ಕಾರಣಗಳಿಂದ ಮನನೊಂದ ವಿನಾಯಕ ನೇಣಿಗೆ ಶರಣಾಗಿದ್ದಾರೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಆಶೋಕ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




