- Advertisement -
ಕರ್ನಾಟಕ ಟಿವಿ : ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಆಗ್ಲೇ ಮೂರು ವಾರಗಳು ಕಳೆದಿವೆ.. ಚಿರು ನಟಿಸಬೇಕಿದ್ದ ಸುಮಾರು ಚಿತ್ರಗಳು ಅವರ ಅಗಲಿಕೆಯ ಕಾರಣದಿಂದ ಅರ್ಧಕ್ಕೆ ನಿಂತು ಹೋಗಿವೆ.. ಅವುಗಳಲ್ಲಿ ರಾಜಮಾರ್ತಾಂಡ ಕೂಡ ಒಂದು.. ರಾಜಮಾರ್ತಾಂಡ ಚಿತ್ರದಲ್ಲಿ ಚಿರು ಹಿಂದೆಂದೂ ಕಾಣದಂತಹ ಉತ್ತಮ ಪಾತ್ರದಲ್ಲಿ ನಟಿಸಿದ್ದಾರೆ.. ಸೆಂಟಿಮೆಂಟಲ್ ಸೀನ್ ಗಳಲ್ಲಿ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ರಾಮ್ ನಾರಾಯಣ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.. ಈ ಚಿತ್ರದಲ್ಲಿ ಚಿರು ಪಾತ್ರಕ್ಕೆ,ಅವರ ಸಹೋದರ ಧ್ರುವ ಸರ್ಜಾ ವಾಯ್ಸ್ ಡಬ್ ಮಾಡಲಿದ್ದಾರೆ.. ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಈ ಚಿತ್ರಕ್ಕೆ ಧ್ವನಿ ನೀಡಲು ಮುಂದಾಗಿದ್ದಾರೆ.. ಈ ವಿಚಾರವನ್ನೂ ಸಹ ಸ್ವತ್ಹ ನಿರ್ದೇಶಕರೇ ಹೇಳಿಕೊಂಡಿದ್ದಾರೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ


- Advertisement -