ಕರ್ನಾಟಕ ಟಿವಿ : ರಾಕಿಂಗ್ ಸ್ಟಾರ್ ಯಶ್ ನಟನೆಯ ಸೂಪರ್ ಹಿಟ್ ಸಿನಿಮಾ ಕೆಜಿಎಫ್.. ಆ ಸಿನಿಮಾ ನೋಡಿ ಥ್ರಿಲ್ ಆಗಿದ್ದ ಸಿನಿ ಪ್ರಿಯರು ಇದೀಗ ಕೆಜಿಎಫ್ ಚಾಪ್ಟರ್ 2 ಗಾಗಿ ಕಾತರದಿಂದ ಕಾಯ್ತಿದ್ದಾರೆ.. ಲಾಕ್ ಡೌನ್ ಗೂ ಮೊದಲೇ ಸಿನಿಮಾ ಶೀೂಟಿಂಗ್ ಭರದಿಂದ ಸಾಗಿತ್ತು.. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ಸಿನಿಮಾ ಈ ವರ್ಷ ಅಕ್ಟೋಬರ್ 23ಕ್ಕೆ ರಿಲೀಸ್ ಆಗ್ಬೇಕಿತ್ತು.. ಆದ್ರೆ ಮಹಾಮಾರಿ ಕೊರೋನ ಕಾರಣದಿಂದಾಗಿ ಚಿತ್ರದ ಶೂಟಿಂಗ್ ಗೆ ತೆರೆಬಿದ್ದಿತ್ತು.. ಹೀಗಾಗಿ ಕೆಜಿಎಫ್ 2 ಚಿತ್ರದ ಇನ್ನು ಬಹುಭಾಗದ ಚಿತ್ರೀಕರಣ ಬಾಕಿ ಉಳಿದಿದೆ.. ಲಾಕ್ ಡೌನ್ ಟೈಮ್ ನಲ್ಲಿ ಚಿತ್ರದ ಎಡಿಟಿಂಗ್ ಕಾರ್ಯದಲ್ಲಿ ತೊಡಗಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಚಿತ್ರೀಕರಣದ ಪುನರಾರಂಭದ ಕಡೆಗೆ ಗಮನ ಹರಿಸ್ತಿದ್ದಾರೆ.. ಕೆಜಿಎಫ್ ಬಿಗ್ ಬಜೆಟ್ ಸಿನಿಮಾ ಆಗಿರೋದ್ರಿಂದ ದೊಡ್ಡ ಸೆಟ್ ನಲ್ಲಿ ನೂರಾರು ಜನರು ಸೇರಿ ಚಿತ್ರೀಕರಣ ಮಾಡ್ಬೇಕಾಗುತ್ತೆ.. ಹೀಗಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ನಿಧಾನವಾಗಿ ಶೂಟಿಂಗ್ ಮಾಡುತ್ತೇವೆ.. ಸದ್ಯಕ್ಕೆ ಕೆಲವೇ ಮಂದಿ ತಂತ್ರಜ್ಞರನ್ನು ಬಳಸಿಕೊಂಡು, ಹೆಚ್ಚು ಜನರು ಅಗತ್ಯವಿಲ್ಲದ ದೃಶ್ಯಗಳನ್ನು ಮಾತ್ರ ಚಿತ್ರೀಕರಿಸೋದಾಗಿ ತಿಳಿಸಿದ್ದಾರೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

