News: ಅತಿಥಿ ಶಿಕ್ಷಕಿಗೆ ಅಸಭ್ಯವಾಗಿ ಮೆಸೇಜ್ ಮಾಡಿದ ಶಿಕ್ಷಕನಿಗೆ ಬಿತ್ತು ಭರ್ಜರಿ ಗೂಸಾ

Raichur News: ರಾಯಚೂರಿನ ಹೊರವಲಯದ ಆದರ್ಶ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಪೊಲೀಸರು ಬಾರಿಸಿ, ಬೆಂಡೆತ್ತಿದ್ದಾರೆ. ಅತಿಥಿ ಶಿಕ್ಷಕಿಗೆ ಮಲಗಲು ಕರೆದು ಅಸಭ್ಯವಾಗಿ ಮೆಸೇಜ್ ಮಾಡಿದ್ದಕ್ಕೆ, ಈ ಶಿಕ್ಷಕನನ್ನು ಪೊಲೀಸರು ಚೆನ್ನಾಗಿ ಗೂಸಾ ನೀಡಿದ್ದಾರೆ.

ಮೆಹಬೂಬ್ ಅಲಿ ಎಂಬ ಶಿಕ್ಷಕ, ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿದ್ದ. ಈ ವಿಷಯವನ್ನು ಶಿಕ್ಷಕಿ ತನ್ನ ಮನೆಯಲ್ಲಿ ಹೇಳಿದ್ದು, ಸಂಬಂಧಿಕರು ಶಾಲೆಗೆ ಬಂದು, ಶಿಕ್ಷಕನಿಗೆ ಚೆನ್ನಾಗಿ ಬೈದು, ಬಟ್ಟೆ ಹರಿಯುವ ರೀತಿ ಬಡಿದಿದ್ದಾರೆ. ಬಳಿಕ ಪೊಲೀಸರು ಚೆನ್ನಾಗಿ ಥಳಿಸಿದ್ದಾರೆ.

ಮಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಲ್ಲದೇ, ಕ್ಷಮಾಪಣಾ ಪತ್ರ ಬರೆದು ಕೊಟ್ಟಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ದೂರು ದಾಖಲಿಸಿಲ್ಲ. ಪೊಲೀಸರು ಬುದ್ಧಿ ಹೇಳಿ ಕಳಿಸಿದ್ದಾರೆ.

About The Author