Health Tips: ನಾವು ಈಗಾಗಲೇ ನಿಮಗೆ ನಮ್ಮ ದೇಹಕ್ಕೆ ವಿಟಾಮಿನ್ ಎ, ಬಿ, ಸಿ, ಈ ಹೇಗೆ ಸಹಾಯಕ..? ಇದಕ್ಕಾಗಿ ನಾವು ಏನನ್ನು ಸೇವನೆ ಮಾಡಬೇಕು..? ಈ ವಿಟಾಮಿನ್‌ಗಳ ಕೊರತೆಯುಂಟಾದರೆ, ನಮಗೆ ಯಾವ ಯಾವ ಸಮಸ್ಯೆ ಬರುತ್ತದೆ ಎಂದು ಹೇಳಿದ್ದೇವೆ. ಅದೇ ರೀತಿ ಇಂದು ವಿಟಾಮಿನ್ ಕೆ ಕೊರತೆಯುಂಟಾದರೆ, ನಮ್ಮ ದೇಹದಲ್ಲಾಗುವ ಸಮಸ್ಯೆ ಎಂಥದ್ದು..? ಅದಕ್ಕಾಗಿ ನಾವು ಏನನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ನಿಮ್ಮ ದೇಹದಲ್ಲಿ ವಿಟಾಮಿನ್ ಕೆ ಕೊರತೆಯುಂಟಾಗಿದೆ ಅಂದ್ರೆ, ನೀವು ಸೊಪ್ಪು, ಹಣ್ಣು, ತರಕಾರಿ ಸೇವಿಸಿಯಷ್ಟೇ ಈ ವಿಟಾಮಿನ್ ಕೆ ಪಡೆಯಬಹುದು. ಬೇರೆ ಆಹಾರ ಸೇವನೆಯಿಂದ ನಿಮಗೆ ಈ ಅಂಶ ಸಿಗುವುದಿಲ್ಲ.
ವಿಟಾಮಿನ್ ಕೆ ನಮ್ಮ ದೇಹಕ್ಕೆ ಸಿಕ್ಕರೆ, ಅದರಿಂದ ನಮ್ಮ ರಕ್ತನಾಳಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ದೇಹಕ್ಕೆ ಬೇಕಾದ ಗುಡ್ ಕೊಲೆಸ್ಟ್ರಾಲ್ ಒದಗಿಸುವಲ್ಲಿ ವಿಟಾಮಿನ್ ಕೆ ಸಹಾಯಕವಾಗಿದೆ. ಆದರೆ ನಮ್ಮ ದೇಹದಲ್ಲಿ ವಿಟಾಮಿನ್ ಕೆ ಕೊರತೆಯುಂಟಾದರೆ, ರಕ್ತಸ್ರಾವ ಹೆಚ್ಚಾಗುತ್ತದೆ. ಮೂಗಿನಿಂದ, ವಸಡಿನಲ್ಲಿ, ಋತುಚಕ್ರವಿದ್ದಾಗ, ಅತೀಯಾದ ರಕ್ತಸ್ರಾವ ಹೀಗೆ ರಕ್ತಸ್ರಾವವಾಗುತ್ತದೆ. ದೇಹಕ್ಕೆ ವಿಟಾಮಿನ್ ಕೆ ಕೊರತೆ ಇದ್ದಾಗ, ಇಂಥ ಸಮಸ್ಯೆ ಉದ್ಭವಿಸುತ್ತದೆ.
ಎಲೆಕೋಸು, ನವಿಲುಕೋಸು, ಪಾಲಕ್, ಬ್ರೋಕೋಲಿ, ಸೋಯಾ ಕಾಳು, ಹಸಿರು ಸೊಪ್ಪುಗಳ ಸೇವನೆಯಿಂದ ನೀವು ನಿಮ್ಮ ದೇಹದಲ್ಲಿರುವ ವಿಟಾಮಿನ್ ಕೆ ಕೊರತೆಯನ್ನು ನೀಗಿಸಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.