Hubli News: ಹುಬ್ಬಳ್ಳಿ: ಸಸ್ಪೆಂಡ್ ಆಗಿರೋ ಪೊಲೀಸಗೆ ಸಿಎಂ ಪದಕ ಘೋಷಣೆ ದುರ್ದೈವದ ಸಂಗತಿ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹೇಶ್ ಟೆಂಗಿನಕಾಯಿ, ಹಲವು ಆರೋಪಗಳ ಹೊತ್ತು ಮೈಸೂರಿನ ಸಿಸಿಬಿ ಬ್ರ್ಯಾಂಚನ ಪಾಷಾ ಸಸ್ಪೆಂಡ್ ಆಗಿದ್ದಾರೆ. ಅಂತವರಿಗೆ ಈ ಸರ್ಕಾರ ಗೃಹ ಇಲಾಖೆ ಸಿಎಂ ಪದಕ ನೀಡುತ್ತಿದೆ. ಸಸ್ಪೆಂಡ್ ಆದ ಮೈಸೂರಿನ ಸಿಸಿಬಿ ಬ್ರ್ಯಾಂಚನಲ್ಲಿ ಸಲೀಂ ಪಾಷಾ ವ್ಯಕ್ತಿಗೆ ಈ ಸರ್ಕಾರ ಪದಕ ನೀಡಿತ್ತಿದೆ. ಸರ್ಕಾರದ ಈ ನಡೆ ನೋಡೆ ನೋಡಿದ್ದರೆ ಎಷ್ಟು ಎಚ್ಚರದಿಂದ ಆಡಳಿತ ನಡೆಸುತ್ತಿದೆ ಅರ್ಥವಾಗುತ್ತೆ. ಈ ಪಾಷಾ ಕಳೆದ ಒಂದು ತಿಂಗಳ ಹಿಂದೆಯೇ ಸಸ್ಪೆಂಡ್ ಆಗಿದ್ದಾನೆ.
ಈ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಎಷ್ಟರಮಟ್ಟಿಗೆ ಇದೆ ಅಂತಾ ಇದೇ ತೋರಿಸುತ್ತದೆ. ಗೃಹ ಇಲಾಖೆ ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಗೃಹ ಸಚಿವರು ಸಿಎಂ ಅವರು ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಸರ್ಕಾರದ ಇಂತಹ ನಡೆಯಿಂದ ಪ್ರಾಮಾಣಿಕ ಪೊಲೀಸರಿಗೆ ನೋವುಂಟು ಮಾಡುತ್ತದೆ. ಈ ಕೂಡಲೇ ಸರ್ಕಾರ ಗೃಹ ಇಲಾಖೆ ಗಹೋಷಣೆ ಮಾಡಿದ ಪದಕ ಹಿಂಪಡೆಬೇಕು ಎಂದು ಮಹೇಶ್ ಟೆಂಗಿನಕಾಯಿ ಆಗ್ರಹಿಸಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಎಕ್ಸ್ ಖಾತೆ ಮೂಲಕ ಅಸಮಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್, ಬೆಂಗಳೂರು ಅಷ್ಟೇಯಲ್ಲ ದೊಡ್ಡ ನಗರಗಳ ರಸ್ತೆಗಳು ಗುಂಡಿಗಳು ಹೆಚ್ಚಾಗಿವೆ. ಇದರಿಂದ ಸಾರ್ವಜನಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಟ ಮಾಡುತ್ತಿದ್ದಾರೆ. ರಸ್ತೆ ಗುಂಡಿಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ಬಗ್ಗೆ ಹಿರಿಯ ಸಚಿವರೇ ಈಗ ಅಸಮಧಾನ ಹೊರಹಾಕಿದ್ದಾರೆ ಎನ್ನುವ ಮೂಲಕ, ಸಚಿವ ಕೃಷ್ಣಭೈರೇಗೌಡ ಎಕ್ಸ್ ಪೋಸ್ಟ್‌್ ಶಾಸಕರು ಬೆಂಬಲಿಸಿದ್ದಾರೆ.
ಸಚಿವರೊಬ್ಬರು ತಮ್ಮ ಸರ್ಕಾರದ ವಿರುದ್ಧವೇ ಅಸಮಧಾನ ಹೊರಹಾಕಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯ ಮಟ್ಟಿಗೆ ಬಂದಿದೆ. ಈ ಕೂಡಲೇ ಸರ್ಕಾರ ಎಚ್ಚತ್ತುಕೊಳ್ಳಬೇಕು. ಕೂಡಲೇ ಬೆಂಗಳೂರು ಸೇರಿ ಮಾಹಾನಗರ ರಸ್ತೆ ಗುಂಡಿಗಳ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.

