Festival News: ಧಾರವಾಡದ ಆಂಗ್ಲ ಶಾಲೆಯಲ್ಲಿ ರಕ್ಷಾಬಂಧನ ಸಂಭ್ರಮ

Dharwad News: ಅಣ್ಣ ತಂಗಿ ಅಕ್ಕ‌ ತಮ್ಮಣ್ಣ ಸಹೋದರತ್ವದ ಸಂಕೇತವಾಗಿರುವ ರಾಖಿ ಹಬ್ಬದ ಸಂಭ್ರಮ ಪೇಡಾ ನಗರಿ ಧಾರವಾಡ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮನೆ ಮಾಡಿದ್ದು, ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ವಿದ್ಯಾರ್ಥಿನಿಯರು ರಾಖಿ ಹಿಡಿದು ಬಂದು ಶಾಲೆಯಲ್ಲಿ ಅರ್ಥಪೂರ್ಣವಾಗಿ ರಕ್ಷಾ ಬಂಧನ ಆಚರಣೆ ಮಾಡಿದರು.

ಧಾರವಾಡದ ಮೃತ್ಯುಂಜಯ ನಗರ ಬಡಾವಣೆಯಲ್ಲಿರುವ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಕ್ಲಾಸ್ ರೂಮನಲ್ಲಿ ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿನಿಯರು ಸಹೋದರ ಸ್ಥಾನದಲ್ಲಿರೋ ತಮ್ಮ ಆತ್ಮೀಯ ಸ್ನೇಹಿತರಿಗೆ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿಗಳಿಗೆ ರಾಖಿ ಹಬ್ಬದ ಶುಭಾಶಯಗಳನ್ನು ಹೇಳಿದರು.

ಇನ್ನ ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೂಡಾ ರಾಖಿ ಕಟ್ಟಿದ ವಿದ್ಯಾರ್ಥಿನಿಯರಿಗೆ ಚಾಕಲೇಟ್ ನೀಡುವ ಮೂಲಕ ಹಬ್ಬದ ಶುಭಾಯಶಗಳನ್ನು ತಿಳಿಸಿದರು. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಇಂದು ರಕ್ಷಾ ಬಂಧನ ಕಳೆ ಜೋರಾಗಿದ್ದು, ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರು ಹಬ್ಬದಲ್ಲಿ ಭಾಗಿಯಾಗುವ ಮೂಲಕ ರಕ್ಷಾ ಬಂಧನದ ಕಳೆ ಹೆಚ್ಚಿಸಿದರು.‌

About The Author