Thursday, October 23, 2025

Latest Posts

ರಕ್ಷಾ ಬಂಧನ; ದರ್ಶನ್​ ನೆನೆದು ಸೋನಲ್​ ಭಾವುಕ ಪೋಸ್ಟ್!

- Advertisement -

ಇಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸುವ ದಿನ. ರಕ್ಷಾಬಂಧನ ಅಂದ್ರೆ ಅಣ್ಣತಂಗಿಯರ ಬಾಂಧ್ಯವವನ್ನ ಹೆಚ್ಚಿಸುವ ಹಬ್ಬವಾಗಿದ್ದು, ಅಣ್ಣನಿಗೆ ರಾಖಿ ಕಟ್ಟಿ, ಅವನ ಹಣೆಗೆ ತಿಲಕವನ್ನಿಟ್ಟು, ಶುಭಾಶಯವನ್ನ ಕೋರುವ ದಿನ. ಇಂತಹ ಹಬ್ಬವನ್ನು ಸ್ಯಾಂಡಲ್​ವುಡ್​ನ ನಟಿ ಸೋನಲ್​ ಮಂಥೆರೋ ತಮ್ಮ ಅಣ್ಣನನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ನಟ ದರ್ಶನ್​ ಅವರನ್ನ ಸೋನಲ್​ ತನ್ನ ಸ್ವಂತ ಅಣ್ಣನಂತೆ ಕಾಣುತ್ತಾರೆ. ಆದರೆ ಇಂದು ಅಣ್ಣ ಜೊತೆಗಿಲ್ಲದಿರುವುದನ್ನ ಕಂಡು ಸೋನಲ್​, ಇನ್​ಸ್ಟಾಗ್ರಾಮ್​ನಲ್ಲಿ ಭಾವುಕ ಪೋಸ್ಟ್ ಶೇರ್​ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್​ ಜೈಲು ಸೇರಿ 2 ತಿಂಗಳಾಗಿದೆ. ಡಿಬಾಸ್​ ನಟನೆಯ ‘ರಾಬರ್ಟ್’​ ಸಿನಿಮಾದಲ್ಲಿ ಸೋನಲ್​ ನಟಿಸಿದ್ದರು. ದರ್ಶನ್​ ತಂಗಿ ಸಮಾನವಾದ, ವಿನೋದ್​ ಪ್ರಭಾಕರ್​ಗೆ ಜೋಡಿಯಾಗಿ ನಟಿಸಿದ್ರು. ನಂತರ ಸೋನಲ್​ ಹಾಗೂ ದರ್ಶನ್​ ಬಾಂಧವ್ಯ ಹೆಚ್ಚಾಗಿದ್ದು, ಅವತ್ತಿನಿಂದ ಇಲ್ಲಿಯವರೆಗೂ ಸೋನಲ್,​ ದರ್ಶನ್​ ಅವರಿಗೆ ರಾಖಿ ಕಟ್ಟುತ್ತಾ ರಕ್ಷಾ ಬಂಧನವನ್ನ ಆಚರಿಸುತ್ತಿದ್ದರು. ಆದರೆ ಈ ವರ್ಷ ಅಣ್ಣ ಜೊತೆಗಿಲ್ಲದ್ದರಿಂದ ರಾಖಿ ಹಬ್ಬದ ಸಂಭ್ರಮಕ್ಕೆ ಬ್ರೇಕ್​ ಬಿದ್ದಿದೆ. ಇತ್ತೀಚೆಗೆ ಸೋನಲ್​ ಸ್ಟಾರ್ ಡೈರೆಕ್ಟರ್​ ತರುಣ್​ ಸುಧೀರ್ ಜೊತೆ​ ಸಪ್ತಪದಿ ತುಳಿದಿದ್ರು. ತರುಣ್ ಹಾಗೂ ದರ್ಶನ್​ ತುಂಬಾ ಆಪ್ತ ಗೆಳೆಯರು. ಇಬ್ಬರಿಗೂ ತುಂಬಾ ಹತ್ತಿರವಾದ ದರ್ಶನ್​, ಸದ್ಯ ಜೈಲಿನಲ್ಲಿರೋದ್ರಿಂದ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ.
ಈ ಹಿಂದೆ ಡಿಬಾಸ್​ಗೆ ಸೋನಲ್​ ರಾಖಿ ಕಟ್ಟಿದ್ದ ವಿಡಿಯೋವೊಂದು ಸಖತ್​ ವೈರಲ್​ ಆಗಿತ್ತು. ಆದ್ರೆ ಈ ಬಾರಿ ರಕ್ಷಾ ಬಂಧನದಂದು ದರ್ಶನ್​ ಇಲ್ಲದಿರುವುದರಿಂದ ಭಾವುಕರಾದ ಸೋನಲ್​ ‘ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಗೂ ಮರೆಯಾಗುವುದಿಲ್ಲ. ನಾವು ನಿನ್ನನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಸದಾ ನಾವು ನಿನ್ನ ಪ್ರೀತಿಸುತ್ತೇವೆ ಅಣ್ಣಾ. ರಕ್ಷಾ ಬಂಧನದ ಶುಭಾಶಯಗಳು’ ಅಂತ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

– ಸ್ವಾತಿ.ಎಸ್.

- Advertisement -

Latest Posts

Don't Miss