Friday, July 11, 2025

Latest Posts

ನಿಮ್ಮ ಮೊಬೈಲ್ ಸ್ಪೀಕರ್ ಹಾಳಾಗಿದ್ದರೆ, ಅದನ್ನು ನೀವೇ ಈ ರೀತಿ ಸರಿ ಮಾಡಿಕೊಳ್ಳಿ

- Advertisement -

Technical News: ನಿಮ್ಮ ಮೊಬೈಲ್‌ನಲ್ಲಿ ಏನೋ ಸಮಸ್ಯೆ ಉಂಟಾಗಿ, ಅಥವಾ ನೀರು ಕುಡಿಯುವಾಗ, ಆ ನೀರು ಮೊಬೈಲ್ ಮೇಲೆ ಚೆಲ್ಲಿ, ನಿಮ್ಮ ಮೊಬೈಲ್ ಸ್ಪೀಕರ್‌ ಹಾಳಾಗಬಹುದು. ಈ ವೇಳೆ ಕೆಲವರು ಅಂಗಡಿಗೆ ಹೋಗಿ, ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುತ್ತಾರೆ. ಅದಕ್ಕಾಗಿ ದುಡ್ಡು ಕೊಡುತ್ತಾರೆ. ಆದರೆ, ಈ ರೀತಿ ಬರೀ ಸ್ಪೀಕರ್‌ ಹಾಳಾದಾಗ, ನೀವು ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ. ಬದಲಾಗಿ ಮನೆಯಲ್ಲೇ ನಿಮ್ಮ ಮೊಬೈಲ್ ರಿಪೇರಿ ಮಾಡಿ. ಅದು ಹೇಗೆ ಅಂತಾ ನಾವು ಹೇಳಲಿದ್ದೇವೆ.

ಮೊದಲು ನಿಮ್ಮ ಮೊಬೈಲ್‌ನ್ನು ಕಾಟನ್ ವಸ್ತ್ರದಿಂದ ಚೆನ್ನಾಗಿ ಒರೆಸಿಕೊಳ್ಳಿ. ಫ್ಯಾನ್ ಬಳಿ ಸ್ವಲ್ಪ ಹೊತ್ತು ಮೊಬೈಲ್ ಇಡಿ. ಎಚ್ಚರಿಕೆಯ ವಿಚಾರ ಅಂದ್ರೆ, ನೀವು ತಕ್ಷಣ ಮೊಬೈಲ್ ಚಾರ್ಜ್‌ಗೆ ಹಾಾಕಲೇಬಾರದು. ಯಾಕಂದ್ರೆ ಇದರಲ್ಲಿ ನೀರಿರುವ ಕಾರಣ, ಅನಾಹುತ ಸಂಭವಿಸಬಹುದು. ಹಾಗಾಗಿ ಮೊಬೈಲ್‌ನಲ್ಲಿ ನೀರು ಹೋದಾಗ, ಅದನ್ನು ಚೆನ್ನಾಗಿ ಒರೆಸಿ. ಕೊಂಚ ಹೊತ್ತು ಹಾಗೆ ಬಿಡಿ.

ಬಳಿಕ ಗೂಗಲ್ ಕ್ರೋಮ್‌ಗೆ ಹೋಗಿ, ಫಿಕ್ಸ್ ಮೈ ಸ್ಪೀಕರ್ ಎಂದು ಟೈಪ್ ಮಾಡಿ. ಅಲ್ಲಿ ತೋರಿಸುವ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮಗೆ ಸ್ಪೀಕರ್ ಫೋಟೋ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಜೋರಾಗಿ ಶಬ್ದ ಬರುತ್ತದೆ. 10 ನಿಮಿಷ ಈ ಶಬ್ದವನ್ನು ಹೀಗೆ ಕೇಳಿ. ಬಳಿಕ, ನಿಮ್ಮ ಮೊಬೈಲ್ ಸ್ಪೀಕರ್ ಸರಿ ಆಗಿದೆಯಾ ಎಂದು ಪರೀಕ್ಷಿಸಿ.

ಹೀಗೆ ಮಾಡಿದಾಗ, ನಿಮ್ಮ ಸ್ಪೀಕರ್‌ನಲ್ಲಿ ತುಂಬಿರುವ ನೀರು, ಆ ಶಬ್ದದಿಂದ ಹೊರಹೋಗುತ್ತದೆ. ಆಗ ನಿಮ್ಮ ಮೊಬೈಲ್ ಸ್ಪೀಕರ್ ಕ್ಲೀಯರ್ ಆಗುತ್ತದೆ.

- Advertisement -

Latest Posts

Don't Miss