Dharwad News: ೧೩೮ ವರ್ಷಗಳ ಕಾಲ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹುಬ್ಬಳ್ಳಿ ಗಿರಣಿಚಾಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯನ್ನು ಕೆಡವಿ ದಕ್ಕೆಯನ್ನುಂಟು ಮಾಡಿದ್ದು, ದುಷ್ಕತೃ ಮೆರೆದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಬೇಕೆಂದು ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದ್ದಾರೆ.
ಸೋಮವಾರ ರಾತ್ರೋ ರಾತ್ರಿ ಸರ್ಕಾರಿ ಶಾಲೆಯ ಗೋಡೆಯನ್ನು ಕಿಡಿಗೇಡಿಗಳು ಕೆಡವಿದ್ದು, ಈ ನಿಟ್ಟಿನಲ್ಲಿಂದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಈಗಾಗಲೇ ಸಂಬಂದಿಸಿದ ಶಿಕ್ಷಣ ಇಲಾಖೆಯ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಈ ದುಷ್ಕತೃದಲ್ಲಿ ಭಾಗಿಯಾಗಿದ್ದಾರೋ ಅವರನ್ನು ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯ ಮಾಡುತ್ತೇನೆ. ಶಿಕ್ಷಣ ಇಲಾಖೆಯವರು ದೂರು ನೀಡಿ, ಶೀಘ್ರ ದುರಸ್ತಿಗೆ ಮುಂದಾಗಬೇಕಿದೆ. ಈ ರೀತಿಯಾಗಿ ಭೂ ಮಾಫಿಯಾ ಮಾಡುವುದು ನಡೆಯಬಾರದು. ರಾತ್ರೋ ರಾತ್ರಿ ಬಂದು ಜೆಸಿಬಿ ಹಾಗೂ ಇನ್ನೇನು ಆಯುಧ ತಂದು ಧ್ವಂಸ ಮಾಡುವುದು ಸರಿಯಲ್ಲ.
ಏನೇಯಾಗಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಾಲೆಯನ್ನು ಹೋರಾಟ ಮಾಡಿಯಾದರೂ ಉಳಿಸಿ, ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು. ಭೂ ಮಾಪಿಯಾ ವಿಚಾರವಾಗಿ ಈ ಕೃತ್ಯವನ್ನು ಯಾರಾದರೂ ಎಸಗಿದ್ದರೆ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತದನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದರು. ಇನ್ನೂ ಪೊಲೀಸ್ ಇಲಾಖೆಯು ಸತ್ಯಾಸತ್ಯತೆಯನ್ನು ತನಿಖೆ ಮಾಡಬೇಕಿದೆ ಎಂದರು.




