Health Tips: ನಾವು ಈಗಾಗಲೇ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್ ನೀಡಿದ್ದೇವೆ. ಅದೇ ರೀತಿ ಇಂದು ನಾವು ಒಂದು ವಸ್ತುವಿನ ಸೇವನೆಯಿಂದ ಆರೋಗ್ಯವನ್ನು ಯಾವ ರೀತಿ ಉತ್ತಮಗೊಳಿಸಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಪಿಸ್ತಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪಿಸ್ತಾವನ್ನು ಎಲ್ಲರೂ ಇಷ್ಟಪಟ್ಟು ತಿಂತಾರೆ. ಯಾಕಂದ್ರೆ ಪಿಸ್ತಾ ತಿನ್ನಲು ರುಚಿಯಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು. ಹಾಗಾದ್ರೆ ಪ್ರತಿದಿನ 3ರಿಂದ 4ಪಿಸ್ತಾ ಸೇವನೆ ಮಾಡಿದ್ರೆ, ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಪ್ರತಿದಿನ ಪಿಸ್ತಾ ತಿಂದ್ರೆ, ನಿಮ್ಮ ತೂಕ ಸರಿಯಾಗಿ ಇರುತ್ತದೆ. ಹಾಗಾಗಿ ನೀವು ತೂಕ ಇಳಿಸಿಕೊಳ್ಳಲು ಅಥವಾ ಮೆಂಟೇನ್ ಮಾಡಲು ಪ್ರಯತ್ನಿಸುತ್ತಿದ್ದರೆ, ನಾಲ್ಕೇ ನಾಲ್ಕು ಪಿಸ್ತಾ ಸೇವಿಸಿ.
ನಿಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದಲ್ಲಿ, ರಾತ್ರಿ ಮಲಗುವ ಮುನ್ನ ನಾಲ್ಕು ಪಿಸ್ತಾ ತಿಂದು ಮಲಗಿ. ಉತ್ತಮ ನಿದ್ರೆ ನಿಮ್ಮ ಪಾಲಾಗುತ್ತದೆ. ಪಿಸ್ತಾದಲ್ಲಿರುವ ಪೋಷಕಾಂಶವು, ನಿದ್ರಾಹೀನತೆಯಿಂದ ಪಾರಾಗಲು ಸಹಾಯಕವಾಗಿದೆ.
ಇನ್ನು ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಲು ನೀವು ಪಿಸ್ತಾ ಸೇವನೆ ಮಾಡಬೇಕು. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ, ನಮ್ಮ ಹೃದಯದ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಾವು ಪಿಸ್ತಾ ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ರಕ್ತನಾಳದಲ್ಲಿ ರಕ್ತಸಂಚಾರ ಸರಾಗವಾಗಿ, ನಮ್ಮ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ಇನ್ನು ಶುಗರ್ ಇದ್ದವರು ಪಿಸ್ತಾ ಸೇವನೆ ಮಾಡಿದರೆ, ಶುಗರ್ ಕಂಟ್ರೋಲ್ ಮಾಡಬಹುದು. ಅಷ್ಟೇ ಅಲ್ಲದೇ, ನಿಮ್ಮ ತ್ವಚೆ ಸುಂದರವಾಗಿರಬೇಕು ಅಂದ್ರೆ, ನಿಮ್ಮ ಮುಖದಲ್ಲಿ ಹೆಚ್ಚು ಸುಕ್ಕು ಕಾಣಿಸಿಕೊಳ್ಳಬಾರದು ಅಂದ್ರೆ, ನೀವು ಪ್ರತಿದಿನ ಮೂರರಿಂದ ನಾಲ್ಕು ಪಿಸ್ತಾ ಸೇವನೆ ಮಾಡಬೇಕು.