Friday, September 20, 2024

Latest Posts

ಈ ಪಾನೀಯ ಸೇವನೆ ಮಾಡಿದ್ರೆ, ನಿಮ್ಮೆಲ್ಲ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

- Advertisement -

Health Tips: ನಮ್ಮ ಆರೋಗ್ಯ ಹಾಳಾಗಲು ಮುಖ್ಯವಾದ ಕಾರಣ ಅಂದ್ರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು. ದೇಹದಲ್ಲಿ ಉಷ್ಣತೆ ಮತ್ತು ತಂಪು ಸಮವಾಗಿದ್ದಾಗ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ದೇಹದಲ್ಲಿ ಹೆಚ್ಚು ತಂಪಿನಂಶವಿದ್ದರೆ, ಅದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ ಜ್ವರ, ನೆಗಡಿ, ಕೆಮ್ಮು ಬರುತ್ತದೆ. ಅದ ಉಷ್ಣತೆ ಹೆಚ್ಚಾದರೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ ಹಲವು ಆರೋಗ್ಯ ಸಮಸ್ಯೆ ಹುಟ್ಟುಕೊಳ್ಳುತ್ತದೆ. ಹಾಗಾಗಿ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಸಮವಾಗಿರಬೇಕು. ಇನ್ನು ನಾವಿಂದು ಹೇಳುವ ಪಾನೀಯವನ್ನು ನೀವು ಮನೆಯಲ್ಲೇ ತಯಾರಿಸಿ ಕುಡಿದರೆ, ನಿಮ್ಮ ದೇಹಕ್ಕೆ ತಂಪು ಸಿಗುವುದಲ್ಲದೇ, ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹಾಗಾದ್ರೆ ಅದು ಯಾವ ಪಾನೀಯ, ಅದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಅಂತಾ ತಿಳಿಯೋಣ ಬನ್ನಿ..

ನಾವು ಇಂದು ವಿವರಿಸಹೊರಟ ಪಾನೀಯ ಅಂದ್ರೆ ರಾಗಿ ಅಂಬಲಿ. ರಾಗಿ ಅಂದ್ರೆ ದೇಹಕ್ಕೆ ತಂಪು ನೀಡುವ ಆಹಾರ. ಅಲ್ಲದೇ ದೇಹಕ್ಕೆ ಶಕ್ತಿ ಕೊಡುವ ಆಹಾರವೂ ಹೌದು. ಹಾಗಾಗಿಯೇ ರಾಗಿ ಮುದ್ದೆ ತಿನ್ನುವವರು ಶಕ್ತಿಯುತರಾಗಿ, ಚೈತನ್ಯದಾಯಕರಾಗಿ ಜೀವನ ನಡೆಸುತ್ತಾರೆ. ಅದೇ ರೀತಿ ರಾಗಿ ಅಂಬಲಿ ಸಹ ಆರೋಗ್ಯಕ್ಕೆ ತುಂಬಾನೇ ಉತ್ತಮ. ಇಂದು ನಾವು ರಾಗಿ ಅಂಬಲಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ತಿಳಿಯೋಣ..

ನೀವು ಡಯಟ್ ಮಾಡುತ್ತಿದ್ದು, ದೇಹದ ತೂಕ ಬೇಗ ಇಳಿಯಬೇಕು ಅಂದ್ರೆ ರಾಗಿ ಅಂಬಲಿ ಕುಡಿಯಿರಿ. ಯಾಕೆ ನಾವು ರಾಗಿ ಅಂಬಲಿ ಕುಡಿಯಬೇಕು ಅಂದ್ರೆ, ಇದು ಹಸಿವು, ದಾಹ ಎರಡನ್ನೂ ತಣಿಸುತ್ತದೆ. ನಮ್ಮ ದೇಹಕ್ಕೆ ಶಕ್ತಿ, ಚೈತನ್ಯವನ್ನೂ ತುಂಬುತ್ತದೆ. ಅಷ್ಟೇ ಅಲ್ಲದೇ, ರಾಗಿ ಸೇವನೆಯಿಂದ ಹಲವು ಸಮಯದ ತನಕ ಹೊಟ್ಟೆ ತುಂಬಿದ ಹಾಗೆ ಇರುತ್ತದೆ. ಬೇರೆ ಆಹಾರ ಹೆಚ್ಚು ಸೇವಿಸುವ ಅಗತ್ಯವಿರುವುದಿಲ್ಲ. ಇದರಿಂದ ದೇಹದ ತೂಕವೂ ಬೇಗ ಕಡಿಮೆಯಾಗುತ್ತದೆ.

ಬೇಸಿಗೆಗಾಲದಲ್ಲಿ ಬಿಸಿನ ಧಗೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುವಂತೆ ಮಾಡುತ್ತದೆ. ಈ ವೇಳೆ ತಂಪಾದ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಈ ಕಾರಣಕ್ಕಾಗಿ ಬೇಸಿಗೆಯಲ್ಲಿ ನಾವು ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಮೊರೆ ಹೋಗುವುದಕ್ಕಿಂತಲೂ, ಮನೆಯಲ್ಲೇ ತಯಾರಿಸಿದ ರಾಗಿ ಅಂಬಲಿ ಕುಡಿಯುವುದು ಉತ್ತಮ. ಇದರಿಂದ ದೇಹ ತಂಪಾಗಿರುತ್ತದೆ.

ಇನ್ನು ಇದು ತಂಪು ಆಹಾರವಾದ ಕಾರಣ, ಇದರ ಸೇವನೆಯಿಂದ ನಿಮ್ಮ ತ್ವಚೆ ಸುಂದರವಾಗುತ್ತದೆ. ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ. ನೀವು ರಾಗಿ ಅಂಬಲಿಯಲ್ಲದಿದ್ದರೂ, ಇದಕ್ಕೆ ಸ್ವಲ್ಪ ಬೆಲ್ಲ ಹಾಕಿ, ರಾಗಿ ಮಾಲ್ಟ್ ಮಾಡಿ ಕುಡಿಯಬಹುದು.

ಇನ್ನು ಮೂಳೆ ಗಟ್ಟಿಗೊಳಿಸುವಲ್ಲಿಯೂ ರಾಗಿ ಸಹಕಾರಿಯಾಗಿದೆ. ಹಾಗಾಗಿ ಮಕ್ಕಳಿಗೆ ರಾಗಿ ಹಿಟ್ಟಿನ ತಿಂಡಿಯನ್ನು ತಿನ್ನಲು ಕೊಡಬೇಕು ಅಂತಾ ಹೇಳಲಾಗುತ್ತದೆ. ರಾಗಿ ಅಂಬಲಿ, ಇಡ್ಲಿ, ದೋಸೆ, ರೊಟ್ಟಿ ಹೀಗೆ ಯಾವುದೇ ರಾಗಿ ಹಿಟ್ಟಿನ ತಿಂಡಿ ಸೇವಿಸಿದರೂ, ಅದರಿಂದ ಮಕ್ಕಳ ಮೂಳೆ ಗಟ್ಟಿಯಾಗುತ್ತದೆ. ಗರ್ಭಿಣಿ ಇದ್ದಾಗಲೂ ರಾಗಿ ಸೇವನೆ ಮಾಡುವುದು ಉತ್ತಮ. ಇದರಿಂದ ಹುಟ್ಟುವ ಮಕ್ಕಳ ಮೂಳೆ ಸ್ಟ್ರಾಂಗ್ ಆಗಿ ಇರುತ್ತದೆ.

- Advertisement -

Latest Posts

Don't Miss