ಪರಿಶುದ್ಧ ಎಣ್ಣೆ.. ಪರಿಶುದ್ಧ ಮಸಾಲಾ.. ಕರ್ನಾಟಕದ ಬ್ರ್ಯಾಂಡ್ ‘ಗಿರಣಿ’

Special Story: ಬೆಂಗಳೂರಿನಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಹೊಟೇಲ್ ಇದೆ. ಆಹಾರ ಪದಾರ್ಥ ಸಿಗುವ ಅಂಗಡಿಗಳು ಇದೆ. ಅಲ್ಲಿ ನಿಮಗೆ ಯಾವ ರೀತಿ ಬೇಕೋ, ಆ ರೀತಿಯ ಆಹಾರವನ್ನು ರೆಡಿ ಮಾಡಿ ಕೊಡಲಾಗುತ್ತದೆ. ಆದ್ರೆ ಅದು ಆರೋಗ್ಯಕರವಾಗಿರುತ್ತೆ ಅನ್ನೋದು ಮಾತ್ರ ಡೌಟ್. ಆದ್ರೆ ಆರೋಗ್ಯಕರ ಗಾಣದ ಎಣ್ಣೆ ಮತ್ತು ಶುದ್ಧ ಮಸಾಲೆ ಪುಡಿ ಬೇಕು ಅಂದ್ರೆ, ಬೆಂಗಳೂರಿನಲ್ಲಿರುವ ಗಿರಣಿಯಲ್ಲಿ ಸಿಗತ್ತೆ. ಈ ಗಿರಣಿ ಬಗ್ಗೆ ಮಾಹಿತಿ ಕೊಡ್ತೀವಿ ನೋಡಿ.

ಬೆಂಗಳೂರಿನ ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ಗಿರಣಿ ಅನ್ನುವ ಗಾಣದ ಎಣ್ಣೆ ಮತ್ತು ಮಸಾಲೆ ಪುಡಿ ಅಂಗಡಿ ಇದೆ. ಇಂದಿನ ಜಾಯಮಾನದಲ್ಲಿ ಆರ್ಗ್ಯಯಾನಿಕ್ ಫುಡ್ ಸಿಗುವುದು ತುಂಬಾ ಅಪರೂಪ. ಹಾಗಾಗಿ ಬೆಂಗಳೂರಿನಲ್ಲಿ ನಿಮಗೆ ಉತ್ತಮವಾದ ಮಸಾಲೆ ಪುಡಿ ಮತ್ತು ಗಾಣದ ಎಣ್ಣೆ ಬೇಕು ಅಂದ್ರೆ ನೀವು ಈ ಅಂಗಡಿಗೆ ಬರಬಹುದು.

ಶಿವಾನಂದ್ ಎಂಬುವವರು ಈ ಗಿರಣಿ ಎಂಬ ಹೆಸರಿನ ಅಂಗಡಿಯನ್ನು ಶುರು ಮಾಡಿದವರು. ಸಾಮಾನ್ಯವಾಗಿ ಊರಲ್ಲಿರುವ ಗಿರಣಿಯಲ್ಲಿ ನಿಮಗೆ ಹಿಟ್ಟು ಬೀಸಿ ಕೊಡಲಾಗುತ್ತದೆ. ಆದ್ರೆ ಇಲ್ಲಿರುವ ಗಿರಣಿಯಲ್ಲಿ ನಿಮಗೆ ಆರೋಗ್ಯಕರ ಮಸಾಲೆ ಮತ್ತು ಪರಿಶುದ್ಧವಾದ ಎಣ್ಣೆ ತಯಾರಿಸಿ ಕೊಡಲಾಗುತ್ತದೆ.

ಇಂದಿನ ಕಾಲದಲ್ಲಿ ಕಲಬೆರಕೆ ಇರುವ ಎಣ್ಣೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜನ ಇದನ್ನೇ ತೆಗೆದುಕೊಂಡು ಹೋಗಿ, ಅಡುಗೆ ಮಾಡಲು ಬಳಸುತ್ತಾರೆ. ಆದರೆ ಇಂಥ ಎಣ್ಣೆಯಿಂದ ಆಹಾರ ತಯಾರಿಸಿ, ಸೇವಿಸಿದ್ರೆ, ಆರೋಗ್ಯ ಹಾಳಾಗೋದಂತೂ ಗ್ಯಾರಂಟಿ. ಹಾಗಾಗಿ ಶಿವಾನಂದ್ ಅವರು ಬೆಂಗಳೂರು ಜನರಿಗೆ ಆರೋಗ್ಯಕರವಾದ ಮಸಾಲೆ ಪುಡಿ ಮತ್ತು ಎಣ್ಣೆ ನೀಡಬೇಕು ಎನ್ನುವ ಕಾರಣಕ್ಕೆ ಈ ಗಿರಣಿ ಎಂಬ ಅಂಗಡಿಯನ್ನು ಓಪನ್ ಮಾಡಿದ್ರು. ಇಲ್ಲಿ ಯಾವ ರೀತಿಯಾಗಿ ಎಣ್ಣೆ ಮತ್ತು ಮಸಾಲೆ ಪುಡಿ ತಯಾರಿಸುತ್ತಾರೆ. ಯಾವ ನಂಬರ್‌ಗೆ ಕಾಲ್ ಮಾಡಿದ್ರೆ, ನಿಮಗೂ ಈ ಎಣ್ಣೆ ಸಿಗಬಹುದು ಅನ್ನೋ ಬಗ್ಗೆ ತಿಳಿಯಬೇಕು ಅಂದ್ರೆ ಈ ವೀಡಿಯೋ ನೋಡಿ.

About The Author