ಕೆಜಿಎಫ್ ಚಿತ್ರದ ಮೂಲಕ ಕನ್ನಡ ಸಿನಿಇಂಡಸ್ಟ್ರಿಯನ್ನ ರಿಚ್ ಲೆವಲ್‌ನಲ್ಲಿ ಇಡೀ ವಿಶ್ವಕ್ಕೇ ಪರಿಚಯಿಸಿದ ಡೈರೆಕ್ಟರ್ ಪ್ರಶಾಂತ್ ನೀಲ್, ಕೆಜಿಎಫ್ ಸಿಕ್ವೇಲ್ ರಿಲೀಸ್‌ಗೂ ರೆಡಿಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಂದಾಜು ಮಾಡಿದ್ದರ ಪ್ರಕಾರ ಕೊರೊನಾ ಇಲ್ಲದಿದ್ದರೆ ಇಷ್ಟೊತ್ತಿಗೆ ಕೆಜಿಎಫ್ ಸಿಕ್ವೇಲ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರ್ತಿತ್ತು. ಆದ್ರೆ ಕೊರೊನಾ ಮಹಾಮಾರಿಯಿಂದ ಲೆಕ್ಕಾಚಾರವೆಲ್ಲ ಮೇಲೆ ಕೆಳಗಾಯಿತು.
ಮಾಲ್ ಓಪೆನ್ ಆದ್ರೂ ಥಿಯೇಟರ್ ಓಪೆನ್ ಆಗಲು ಇನ್ನೇರಡು ತಿಂಗಳು ಬೇಕಾಗಬಹುದು. ಆದ್ರೆ ಕೊರೊನಾ ಭೀತಿಯಿಂದ ಜನ ಆ ವೇಳೆಯೂ ಥಿಯೇಟರ್ಗೆ ಬರಲು ಹೆದರಬಹುದು. ಹೀಗಾಗಿ ಈ ವರ್ಷ ಕೆಜಿಎಫ್ ಪಾರ್ಟ್ 2 ರಿಲೀಸ್ ಆಗೋದು ಬಹುತೇಕ ಡೌಟ್ ಎನ್ನಲಾಗಿದೆ.
ಆದ್ರೆ ಇದೀಗ ಪ್ರಶಾಂತ್ ನೀಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಂದರ್ಶನ ಫೋಟೋವೊಂದನ್ನ ಹಾಕಿ ಗೆಸ್ ಅಂತಾ ಹೇಳಿದ್ದಾರೆ. ಈ ಮೂಲಕ ವೀಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.
ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್, ಮತ್ತು ಡೈರೆಕ್ಟರ್ ಪ್ರಶಾಂತ್ ನೀಲ್ ಸಂದರ್ಶನ ನೀಡುತ್ತಿದ್ದಾರೆ. ಬಹುಶಃ ಇದು ಕೆಜಿಎಫ್ ಸಿಕ್ವೇಲ್ ಬಗ್ಗೆ ಕೊಡುತ್ತಿರುವ ಇಂಟರ್‌ವ್ಯೂ ಅಂತಾ ಕೆಲವರು ಅಂದಾಜಿಸಿದ್ದಾರೆ.
ಕೆಜಿಎಫ್2ನಲ್ಲಿ ರಾಕಿಂಗ್ ಸ್ಟಾರ್ ಜೊತೆಗೆ, ಬಾಲಿವುಡ್ ಕಲಾವಿದರಾದ ಸಂಜಯ್ ದತ್, ರವೀನಾ ಟಂಡನ್ ಬಣ್ಣ ಹಚ್ಚಿದ್ದಾರೆ. ಇನ್ನು ಪ್ರಶಾಂತ್ ನೀಲ್ ಕನ್ನಡದ ಜೊತೆಗೆ ತೆಲುಗು ಸಿನಿಮಾ ಡೈರೆಕ್ಟ್ ಮಾಡಲು ರೆಡಿಯಾಗಿದ್ದಾರೆ.
