Tech: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಯಾವ ರೇಂಜಿಗೆ ಮುಂದುವರೆದಿದೆ ಅಂದ್ರೆ, ನಮಗೆ ಬೇಕಾದ ರೀತಿಯ ಫೀಚರ್ಸ್ ಇರುವ ಗ್ಯಾಜೆಟ್ಸ್ ನಮ್ಮ ಕೈ ಸೇರುತ್ತದೆ. ದುಡ್ಡು ಇರುವುದು ಮಾತ್ರ ಮುಖ್ಯ. ದುಡ್ಡಿದ್ದರೆ, ಎಂಥ ಗ್ಯಾಜೆಟ್ಸ್ ಬೇಕಾದ್ರೂ ಖರೀದಿಸಬಹುದು. ಆದ್ರೆ ನಿಮ್ಮ ಬಳಿ ಕಡಿಮೆ ದುಡ್ಡಿದ್ದರೂ ನೀವು ಖರೀದಿಸಬಹುದಾದ ಉಂಗುರವೊಂದನ್ನು ಬೋಟ್‌ನವರು ಬಿಡುಗಡೆ ಮಾಡಿದ್ದಾರೆ.
3ರಿಂದ 4 ಸಾವಿರಕ್ಕೆ ಸ್ಮಾರ್ಟ್ ರಿಂಗ್ ಸಿಗುತ್ತಿದ್ದು, ಇದರೊಂದಿಗೆ ಚಾರ್ಜರ್ ಕೇಬಲ್ ಕೂಡ ಸಿಗುತ್ತದೆ. ಮೊಬೈಲ್‌ನಲ್ಲಿ ಇದಕ್ಕೆ ಬೇಕಾದ ಆ್ಯಪ್ ಡೌನ್ಲೋಡ್ ಮಾಡಿ, ಕನೆಕ್ಟ್ ಮಾಡಿಕೊಂಡರೆ, ಉಂಗುರ ಹೇಗೆ ಕಾರ್ಯನಿರ್ವಹಿಸಬೇಕೋ, ಹಾಗೆ ಕಾರ್ಯನಿರ್ವಹಿಸುತ್ತದೆ. 4.7 ಗ್ರಾಮ್ ತೂಕದ ಈ ರಿಂಗ್ ಮೂರು ಕಲರ್‌ನಲ್ಲಿ ಬರುತ್ತದೆ.
ನಿಮ್ಮ ಬೆರಳ ಸೈಜ್ ನೋಡಿಕೊಂಡು ಉಂಗುರವನ್ನು ನೀವು ಖರೀದಿಸಬೇಕಾಗುತ್ತದೆ. ಇನ್ನು ರಿಂಗ್ ಮೇಲೆ ನೀರು ಬಿದ್ದರೂ, ನೀವು ಬೆವರಿದರೂ ಕೂಡ, ಈ ಉಂಗುರ ಹಾಳಾಗುವುದಿಲ್ಲ. ಇನ್ನು ನೀವು ಇದನ್ನು ಬಳಸಿ, ನಿಮ್ಮ ಹಾರ್ಟ್ ರೇಟ್ ಕಂಡುಹಿಡಿಯಬಹುದು. ನೀವು ನಿಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆಯಬೇಕು ಅಂದ್ರೆ, ನಿಮ್ಮ ಮೊಬೈಲ್ ಹಿಡಿದು ಬೆರಳನ್ನು ಅಲ್ಲಾಡಿಸಿದ್ರೆ, ಫೋಟೋ ಕ್ಲಿಕ್ ಆಗತ್ತೆ. ಫಿಟ್‌ನೆಸ್ ಗೋಲ್ಸ್ ಸೆಟ್ ಮಾಡಿ ಅಚೀವ್ ಮಾಡಬಹುದು. ಇನ್ನು ಇದಕ್ಕಿಂತ ಸ್ಮಾರ್ಟ್ ಆಗಿರುವ ರಿಂಗ್ ಕೂಡ ಲಭ್ಯವಿದ್ದು, ಅದರಲ್ಲಿ ಇನ್ನೂ ಹೆಚ್ಚಿನ ಫೀಚರ್ಸ್ ಇರುತ್ತದೆ.