Health Tips: ಹಾಲಿನ ಸೇವನೆ ಮತ್ತು ತುಪ್ಪದ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಬಿಸಿ ಬಿಸಿ ಹಾಲಿಗೆ, ತುಪ್ಪ ಸೇರಿಸಿ, ಕುಡಿದರೂ ಆರೋಗ್ಯಕ್ಕೆ ಅತ್ಯದ್ಭುತ ಲಾಭವಾಗಲಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ..
ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ತುಪ್ಪ ಸೇರಿಸಿ, ಕುಡಿದು ಮಲಗಿದರೆ, ಉತ್ತಮ ನಿದ್ರೆ ಬರುತ್ತದೆ. ಯಾರಿಗಾದರೂ ನಿದ್ರಾಹೀನತೆ ಸಮಸ್ಯೆ ಇದ್ದಲ್ಲಿ, ಏನೇ ಮಾಡಿದರೂ ಸರಿಯಾಗಿ ನಿದ್ದೆ ಮಾಡಲಾಗುತ್ತಿಲ್ಲ ಎಂದಲ್ಲಿ, ಅಂಥವರು ಬಿಸಿ ಹಾಲಿಗೆ, ತುಪ್ಪ ಸೇರಿಸಿ ಕುಡಿಯಿರಿ.
ಇನ್ನು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವೆಂದಲ್ಲಿ, ಬಿಸಿ ಹಾಲಿಗೆ ತುಪ್ಪ ಸೇರಿಸಿ ಕುಡಿಯಿರಿ. ತುಪ್ಪದ ಸೇವನೆಯಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ. ಅಷ್ಟೇ ಅಲ್ಲದೇ, ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾ ಉತ್ಪತ್ತಿ ಮಾಡಲು ಸಹಕಾರಿಯಾಗಿದೆ.
ನಿಮಗೆ ಕೈಕಾಲು ನೋವು, ಸಂಧಿವಾತ ಇದ್ದಲ್ಲಿ, ಈ ರೀತಿಯಾಗಿ ಹಾಲು- ತುಪ್ಪ ಸೇರಿಸಿ, ಕುಡಿದಲ್ಲಿ ನಿಮ್ಮ ಸಮಸ್ಯೆ ದೂರವಾಗುತ್ತದೆ. ಏಕೆಂದರೆ, ಇವೆರಡೂ ಆಹಾರ, ದೇಹದಲ್ಲಿ ಶಕ್ತಿ ತುಂಬುತ್ತದೆ. ಹಾಗಾಗಿ ಕೈ ಕಾಲು ನೋವು, ಮೂಳೆ ನೋವು ಆಗುವುದಿಲ್ಲ.
ಇನ್ನು ನಿಮ್ಮ ಸ್ಕಿನ್ ಚೆನ್ನಾಗಿರಬೇಕು. ನಿಮ್ಮ ಚರ್ಮ ಆರೋಗ್ಯವಾಗಿರಬೇಕು. ಮುಖದಲ್ಲಿ ಕಳೆ ಬರಬೇಕು ಅಂದ್ರೆ, ನೀವು ಈ ಪೇಯವನ್ನು ಸೇವಿಸಬೇಕು.