Political News: ನಂಜನಗೂಡು ನಗರಸಭೆ ಚುನಾವಣೆ ಸೆಪ್ಟೆಂಬರ್ 3ರಂದು ನಡೆಲಿದ್ದು, ಬಿಜೆಪಿ ನಾಯಕರಿಗೆ ವಿಪ್ ಜಾರಿ ಮಾಡಲಾಗಿದೆ. ಭಾನುವಾರ 4 ಮಂದಿ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದ್ದು, ಗಿರೀಶ್, ಗಾಯತ್ರಿ ಮುರುಗೇಶ್, ವಿಜಯಲಕ್ಷ್ಮೀ, ಮೀನಾಕ್ಷಿ ನಾಗರಾಜುಗೆ ವಿಪ್ ಜಾರಿ ಮಾಡಲಾಗಿದೆ.
ಇವರುಗಳ ಅನುಪಸ್ಥಿತಿಯಲ್ಲಿ ಬಿಜೆಪಿ ಅಧ್ಯಕ್ಷ ಸಿದ್ಧರಾಜು ನೇತೃತ್ವದಲ್ಲಿ ಇವರೆಲ್ಲರ ಮನೆ ಬಾಾಗಿಲಿಗೆ ವಿಪ್ ಅಂಟಿಸಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಪಿ.ದೇವ್‌ಗೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಿಹಾನಾ ಬಾನು ಅವರಿಗೆ ಮತ ಹಾಕಬೇಕಿದೆ. ತಪ್ಪಿದರೆ ಪಕ್ಷಾಂತರ ವಿರೋಧಿ ಕಾನೂನಿನಂತೆ, ಚುನಾವಣೆಗೆ ನಿಲ್ಲದಂತೆ 5 ವರ್ಷಗಳ ಕಾಲ ಅನರ್ಹಗೊಳ್ಳಬೇಕಾಗುತ್ತದೆ.




