Tuesday, December 3, 2024

Latest Posts

Car: ಮಾರ್ಕೆಟ್​​​ನಲ್ಲಿ ಟಾಟಾ ಮತ್ತೆ ಮೋಡಿ

- Advertisement -

ಕಾರುಗಳ ಸಾಮ್ರಾಜ್ಯದಲ್ಲಿ ಈಗ ಟಾಟಾ ಮತ್ತು ಮಹಿಂದ್ರಾ ಕಂಪನಿಯದ್ದೇ ಅಬ್ಬರ. ಇಡೀ ದೇಶದಲ್ಲಿ ಟಾಟಾ ಮತ್ತು ಮಹೀಂದ್ರ ಅಷ್ಟು ಬೇರೆ ಯಾವ್ ಕಾರೂ ಸೇಲ್ ಆಗ್ತಿಲ್ಲ.. ಇಷ್ಟು ದಿನದಿಂದ ಬಹು ಕುತೂಹಲ ಮೂಡಿಸಿದ್ದ ಟಾಟಾ ಮೋಟಾರ್ಸ್​ನ ಕರ್ವ್ ಇದೀಗ ಲಾಂಚ್ ಆಗಿದೆ. .ಬೆಲೆ ಕೂಡ ವೈರಲ್ ಆಗಿದೆ. ಇಂದಿನಿಂದ್ಲೇ ಈ ಕಾರನ್ನು ಖರೀದಿಸ್ಬೋದು

 

ಮಿಡ್​ ರೇಂಜ್​ ಎಸ್​​ಯುವಿ ಅಲ್ಲಿ ಟಾಟಾ ಕರ್ವ್​ ಡಿಸೈನ್ ನೋಡಿ ಈಗಾಗ್ಲೇ ಕಾರು ಪ್ರಿಯರು ಫಿದಾ ಆಗಿದ್ರು. ಯಾವಾಗ ಶೋರೂಂನಲ್ಲಿ ಸಿಗುತ್ತೋ ಅಂತ ವಾಹನ ಪ್ರಿಯರು ಕಾಯ್ತಿದ್ರು.. ಈಗ ಅಂತಾ ಟೈಂ ಬಂದೇಬಿಟ್ಟಿದೆ. ಟಾಟಾ ಕರ್ವ್ ಇದೀಗ ಲಾಂಚ್ ಆಗಿದೆ. ಈ ಕಾರು ಹೂಂಡೈ ಕ್ರೆಟಾ, ಮಾರುತು ಸುಝುಕಿ ಗ್ರಾಂಡ್ ವಿಟಾರಾ ಹಾಗೇ ಕಿಯಾ ಸೆಲ್ಟೋಸ್​​ಗೆ ಸೈಡ್ ಕೊಡಲಿದೆ.

ಟಾಟಾ ಕರ್ವ್ ಕಾರು 3 ಬಗೆಯ ಇಂಜಿನ್​​ನಲ್ಲಿ ಸಿಗ್ತಿದೆ. 1.2 ಲೀಟರ್ ರೆವಟ್ರೋನ್ ಟರ್ಬೋ ಪೆಟ್ರೋಲ್ ಇಂಜನ್, 1.2 ಲೀಟರ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಹಾಗೇ 1.5 ಲೀಟರ್​ ಡೀಸೆಲ್ ಇಂಜಿನ್​​​ನಲ್ಲಿ ಕರ್ವ್ ಗಾಡಿ ಸಿಗ್ತಿದೆ.

 

ಟಾಟಾ ಕರ್ವ್, ಈ ಹಿಂದಿನ ಎಲ್ಲಾ ಕಾರುಗಳಿಗಿಂತ್ಲೂ ಒಳ್ಳೇ ಫೀಚರ್​​ಗಳಿವೆ. 12.3 ಇಂಚಿನ ಟಚ್​​ ಸ್ಕ್ರೀನ್ ಇನ್​ಫೋಟೈನ್​​ಮೆಂಟ್ ಸಿಸ್ಟಂ, ಪನೋರೋಮಿಕ್ ಸನ್​​ರೂಫ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಟಚ್ ಕಂಟ್ರೋಲ್ ಎಸಿ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಮುಂಭಾಗದಲ್ಲೂ ಪಾರ್ಕಿಂಗ್ ಸೆನ್ಸಾರ್​ಗಳಿವೆ. ಡ್ರೈವರ್ ಸೀಟ್ ಪವರ್ ಅಡ್ಜಸ್ಟಬಲ್ ಕೂಡ ಇರುತ್ತೆ. ಹಿಂಭಾಗದ ಸೀಟುಗಳನ್ನ ರಿಕ್ಲೂನ್ ಮಾಡಬಹುದು. ADAS ಸಿಸ್ಟಂ ಕೂಡ ಇರುತ್ತೆ.

 

ಟಾಟಾ ಕರ್ವ್ ಎಸ್​ಯುವಿ ಕಾರಿನ ಅರಂಭಿಕ ಬೆಲೆ ಕೇವಲ 9.99 ಲಕ್ಷ ಇದೆ. ಗರಿಷ್ಠ 17.69 ಲಕ್ಷದವರೆಗೂ ಈ ಕಾರು ಸಿಗುತ್ತೆ. 6 ಬಣ್ಣಗಳಲ್ಲಿ ಟಾಟಾ ಕರ್ವ್ ಸಿಗ್ತಿದೆ.. ನೆಕ್ಸಾನ್, ಟಿಯಾಗೋ, ಪಂಚ್ ಕಾರುಗಳಿಗಿಂತಲೂ ಟಾಟಾ ಕರ್ವ್ ನೋಡಲು ಸ್ಟೈಲಿಶ್ ಲುಕ್​​ನಲ್ಲಿದೆ…

- Advertisement -

Latest Posts

Don't Miss