ಸಾಮಾನ್ಯವಾಗಿ ಜನ ಕೋಳಿ, ಕುರಿ, ಮೇಕೆ, ಮೀನು, ಇಂಥದ್ದನ್ನು ತಿಂತಾರೆ.. ಆದ್ರೆ ಇಲ್ಲಿನ ಜನ ಹಸಿವು ನೀಗಿಸಿಕೊಳ್ಳೋಕೆ ದೊಡ್ಡ ದೊಡ್ಡ ಆನೆಗಳನ್ನೇ ಬೇಟೆಯಾಡಿ ತಿಂತಿದ್ದಾರೆ.. ಸರ್ಕಾರವೇ ಇದಕ್ಕೆ ಪರ್ಮಿಷನ್ ಕೊಟ್ಟಿದೆ. ಸರ್ಕಾರವೇ ಆನೆಯಂತಾ ಪ್ರಾಣಿಗಳನ್ನ ಬೇಟೆಯಾಡಿ ಜನರ ಹೊಟ್ಟೆ ತುಂಬಿಸ್ತಿದೆ.. ಇಂಥಾ ವಿಚಿತ್ರ ಪದ್ಧತಿ ನಡೆದಿರೋದು ಎಲ್ಲಿ ಅಂತ ಹೇಳ್ತೀವಿ ಇಂದಿನ ವಿಡಿಯೋದಲ್ಲಿ ಸ್ಕಿಪ್ ಮಾಡದೆ ಪೂರ್ತಿ ನೋಡಿ
ಆನೆಗಳನ್ನು ದಂತಕ್ಕಾಗಿ ಬೇಟೆ ಆಡೋದನ್ನ ಕೇಳಿದ್ವಿ.. ಅದೇ ರೀತಿ ಹುಲಿ, ಸಿಂಹ, ಚಿರತೆ ಮುಂತಾದವನ್ನು ಅವುಗಳ ಚರ್ಮ, ಉಗುರುಗಳಿಗಾಗಿ ಬೇಟೆ ಆಡೋದನ್ನ ನೋಡಿದ್ದೀವಿ.. ಈಗ ಕಾಡಿನ ಈ ದೈತ್ಯ ಜೀವಿಗಳನ್ನು ಊಟಕ್ಕಾಗಿ ಬೇಟೆ ಆಡಲಾಗ್ತಿದೆ. ಕಾಡಿನ ಚಿಕ್ಕಪುಟ್ಟ ಪ್ರಾಣಿಗಳನ್ನ ಬಿಟ್ಟು ಈಗ ದೊಡ್ಡ ದೊಡ್ಡ ಪ್ರಾಣಿಗಳನ್ನೇ ಅಡುಗೆ ಮಾಡ್ಕೊಂಡು ತಿಂತಿದ್ದಾನೆ ಈ ಮನುಷ್ಯ.. ಸ್ವತಃ ಸರ್ಕಾರವೇ ಪ್ರಾಣಿ ಬೇಟೆ ಆಡಿ ಜನರಿಗೆ ಊಟ ಸಪ್ಲೈ ಮಾಡ್ತಿದೆ.. ಇಂಥಾ ಘಟನೆ ನಡೆದಿರೋದು ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ
ನಮೀಬಿಯಾ ದೇಶ ಹಿಂದೆಂದೂ ಕಾಣದ ಬರಗಾಲಕ್ಕೆ ಸಿಲುಕಿದೆ.. ಆಹಾರ ಕ್ಷಾಮ ಜೋರಾಗಿದೆ. ಅಲ್ಲಿನ ಜನರಿಗೆ ಊಟವೇ ಸಿಗ್ತಿಲ್ಲ.. ಸೊಪ್ಪು ತರಕಾರಿ ಬೆಳೀತಿಲ್ಲ, ಗದ್ದೆ, ಹೊಲಗಳಲ್ಲಿ ಧಾನ್ಯಗಳು ಬೆಳೀತಿಲ್ಲ.. ಹೀಗಾಗಿ ನಮೀಬಿಯಾ ಸರ್ಕಾರ ಜನರ ಹೊಟ್ಟೆ ತುಂಬಿಸೋಕೆ ಇದೀಗ ಕಾಡಿನ ಪ್ರಾಣಿಗಳನ್ನೇ ಬೇಟೆಯಾಡಲು ನಿರ್ಧರಿಸಿದೆ. ಶತಮಾನದ ಭೀಕರ ಬರದಿಂದ ಆಹಾರ ಕ್ಷಾಮಕ್ಕೆ ಸಿಲುಕಿರೋ ತನ್ನ ದೇಶದ ಜನರಿಗೆ ಆಹಾರ ಪೂರೈಸೋಕೆ ಅಂತ ಈಗ ಆನೆಗಳನ್ನೂ ಸೇರಿದಂತೆ 700ಕ್ಕೂ ಅಧಿಕ ವನ್ಯಜೀವಿಗಳ ಜೀವ ತೆಗೆಯಲು ಸರ್ಕಾರ ಮುಂದಾಗಿದೆ.
ನಮೀಬಿಯಾದಲ್ಲಿ ಶೇಕಡಾ 84ರಷ್ಟು ಆಹಾರ ಸಂಗ್ರಹ ಮುಗಿದಿದೆ. 25 ಲಕ್ಷಕ್ಕೂ ಹೆಚ್ಚಿನ ಜನ ಹಸಿವಿನಿಂದ ದಿನ ದೂಡುವ ಪರಿಸ್ಥಿತಿಗೆ ತಲುಪಿದ್ದಾರೆ. ಕುಡಿಯೋ ನೀರು ಕೂಡ ಸಿಗ್ತಿಲ್ಲ.. ಹೀಗಾಗಿ ಬರ ಪರಿಸ್ಥಿ ಎದುರಿಸಲು ಸರಕಾರ ವನ್ಯಜೀವಿಗಳ ಮೇಲೆ ಕಣ್ಣಿಟ್ಟಿದೆ. ವನ್ಯಜೀವಿಗಳನ್ನ ಕೊಂದು ಅದರ ಮಾಂಸವನ್ನು ಜನರಿಗೆ ಪೂರೈಸಿ ಹಸಿವು ತಣಿಸಲು ನಿರ್ಧರಿಸಿದೆ. ಕಾಡಿನಲ್ಲಿ ಆನೆ, ಘೇಂಡಾಮೃಗ, ಕಾಡೆಮ್ಮೆ, ಜೀಬ್ರಾ, ಜಿಂಕೆ ಸಹಿತ 723 ಜಾತಿಯ ವನ್ಯಪ್ರಾಣಿಗಳು ಈಗ ಮನುಷ್ಯರ ಹೊಟ್ಟೆ ಸೇರಲಿದೆ. ಈಗಾಗಲೇ ಬೇಟೆ ಆರಂಭಿಸಿರುವ ನಮೀಬಿಯಾ ಸರಕಾರ, 157 ಕಾಡುಪ್ರಾಣಿಗಳ ಜೀವ ತೆಗೆದಿದೆ. ಇದ್ರಿಂದ ಒಟ್ಟು 56ಸಾವಿರ ಕೆಜಿ ಮಾಂಸ ಸಂಗ್ರಹಿಸಿದೆ. ಸರಕಾರದ ಈ ತೀರ್ಮಾನಕ್ಕೆ ವಿಶ್ವಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಆದರೆ ನಾವಿರೋ ಪರಿಸ್ಥಿತಿಯಲ್ಲಿ ಈ ತೀರ್ಮಾನ ತೆಗೆದುಕೊಳ್ಳದೆ ಬೇರೆ ವಿಧಿಯಿಲ್ಲ ಅಂತ ನಮೀಬಿಯಾ ಸರ್ಕಾರ ಹೇಳಿಕೊಂಡಿದೆ
ನಮೀಬಿಯಾ ಅಷ್ಟೇ ಅಲ್ಲ, ಜಿಂಬಾಬ್ವೆ, ಮಲಾವಿ ಮತ್ತು ಜಾಂಬಿಯಾ ರಾಷ್ಟ್ರಗಳು ಕೂಡ ಭೀಕರ ಬರಕ್ಕೆ ತುತ್ತಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಿವೆ. ಮಳೆ ಆಗದೆ ಇಲ್ಲಿನ ಜನರ ಜೀವನ ಅಧೋಗತಿ ತಲುಪಿದೆ. ಈಗ ಕಾಡಿನ ಪ್ರಾಣಿಗಳನ್ನೇ ತಿನ್ನಲು ನಮೀಬಿಯಾ ಜನ ಮುಂದಾಗಿದ್ದಾರೆ