Saturday, April 5, 2025

Latest Posts

Karnataka : ದನಕಾಯೋನು ಯಾರು? ಎಂ.ಬಿ.ಪಾಟೀಲ್ vs ನಿರಾಣಿ

- Advertisement -

ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರಾದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನಡುವೆ ಮಾತಿಕ ಸಮರ ನಡೀತಿದೆ. ಎಂ.ಬಿ.ಪಾಟೀಲ್​ಗೆ ನಿರಾಣಿ ತಾಕತ್ತಿನ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಎಂ.ಬಿ.ಪಾಟೀಲ್​, ನಿರಾಣಿಗೆ ಸವಾಲ್​ವೊಂದನ್ನು ಹಾಕಿದ್ದಾರೆ.
ಭೂಮಿ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಬಿಜೆಪಿ ಅವಧಿಯಲ್ಲಿನ ಭೂ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ರು. ಇದ್ರಲ್ಲಿ ಮುರುಗೇಶ್ ನಿರಾಣಿ ಹೆಸರು ಕೂಡ ಪ್ರಸ್ತಾಪವಾಗಿತ್ತು.

ಮಾರ್ಚ್​​ 12, 2012ರಲ್ಲಿ ಮುರುಗೇಶ್ ನಿರಾಣಿಯವರು ಬಾಗಲಕೋಟೆ ನವನಗರದಲ್ಲಿ 25 ಎಕರೆ ಭೂಮಿ ಪಡೆದಿದ್ದಾರೆ. ಅಗ್ರೋ ಟೆಕ್ನಾಲಜಿ ಪಾರ್ಕ್​​ನಲ್ಲಿ ಕೈಗಾರಿಕಾ ಭೂಮಿ ಪಡೆದಿದ್ದಾರೆ. ಕೈಗಾರಿಕಾ ಬದಲು ಇಂಟರ್ನ್ಯಾಷನಲ್ ಸ್ಕೂಲ್ ಮಾಡಿದ್ದಾರೆ. ಎಗ್ರೋ ಟೆಕ್ ಪಾರ್ಕ್​ನಲ್ಲಿ 25 ಎಕರೆ ಭೂಮಿ ಅಲರ್ಟ್ ಮಾಡುತ್ತಾರೆ. 25 ಜೊತೆಗೆ ಮತ್ತೆ 6 ಎಕರೆ ಭೂಮಿಯನ್ನು ಪಡೆಯುತ್ತಾರೆ. 2019 ಸಿಎ ಸೈಟ್, 6 ಎಕರೆ ಭೂಮಿಯನ್ನು ಪಡೆಯುತ್ತಾರೆ. ಒಟ್ಟು 31 ಎಕರೆ ಭೂಮಿಯನ್ನು ಮುರುಗೇಶ್ ನಿರಾಣಿ ಪಡೆದಿದ್ದಾರೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದ್ರು.

ಭೂ ಅಕ್ರಮ ಕುರಿತು ಯಾವಾಗ ಎಂ.ಬಿ.ಪಾಟೀಲ್ ಆರೋಪ ಮಾಡಿದ್ರೆ, ಮುರುಗೇಶ್ ನಿರಾಣಿ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ರು. ಯಾರೋ ಪುಣ್ಯಾತ್ಮರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಕುಳಿತುಕೊಂಡು ಗೌಡಕಿ ಮಾಡುತ್ತಿ, ತಾಕತ್ತು ಇದ್ದರೆ, ಸ್ವಂತ ಶಿಕ್ಷಣ ಸಂಸ್ಥೆ, ಕಾರ್ಖಾನೆ ಮಾಡಿ ತೋರಿಸು ಎಂದು ಸಚಿವ ಎಂಬಿ.ಪಾಟೀಲ್​ಗೆ ಸವಾಲು ಹಾಕಿದ್ರು. ಬಂತನಾಳ ಶ್ರೀಗಳು, ದಿವಂಗತ ಹಳಕಟ್ಟಿ ಸೇರಿದಂತೆ ಹಲವು ಹಿರಿಯರು ಸೇರಿ ಬಿಎಲ್​ಡಿಇ ಸಂಸ್ಥೆ ಕಟ್ಟಿದ್ದಾರೆ. ಯಾರೋ ಕಟ್ಟಿರುವ ಹುತ್ತಕ್ಕೆ ಹಾವಾಗಿ ಬಂದು ಬಿಎಲ್​ಡಿಇ ಸಂಸ್ಥೆ ಅಧ್ಯಕ್ಷನಾಗಿ ಎಂಜಯ್ ಮಾಡುತ್ತಿದ್ದಿಯಾ ಎಂದು ನಿರಾಣಿ ವಾಗ್ದಾಳಿ ನಡೆಸಿದರು.

ಬಿಜೆಪಿ ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ‌ ಅವರನ್ನು ಶೆಡ್ ಗಿರಾಕಿ ಮತ್ತು ನನ್ನನ್ನು ದನ ಕಾಯುವವನು ಎಂದು ಹೇಳಿಕೆ ನೀಡಿರುವ ನಿನ್ನ ಯೋಗ್ಯತೆ ಏನೆಂಬುದು ಜನರಿಗೆ ಗೊತ್ತಿದೆ. ಬಸವೇಶ್ವರ ಸಕ್ಕರೆ ಕಾರ್ಖಾನೆ ಕಟ್ಟುತ್ತೇನೆ, ಉದ್ಯೋಗ ಕೊಡುತ್ತೇನೆಂದು ಜಮೀನನ್ನು ಕಡಿಮೆ ದರದಲ್ಲಿ ಖರೀದಿಸಿ, ಈಗ ತಮಿಳುನಾಡಿನವರಿಗೆ ಮಾರಾಟ ಮಾಡಿದ್ದು ಗೊತ್ತಿದೆ. ಕೆಐಎಡಿಬಿಯಿಂದ ಬೇರೆಯವರ ಹೆಸರಿನಲ್ಲಿ ‌ನಿವೇಶನ ಖರೀದಿಸಿ, ತಾವು ಆಸ್ತಿ ಮಾಡಿಕೊಂಡಿದ್ದು ಗೊತ್ತಿದೆ.‌ ಕೈಗಾರಿಕೆ ಕಟ್ಟಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀಯಾ ಹೇಳು ಎಂದು ಸಚಿವ ಪಾಟೀಲ್​ಗೆ ಸವಾಲು ಹಾಕಿದ್ರು.

ಮಿಸ್ಟರ್​ ಮುರುಗೇಶ್​ ನಿರಾಣಿ ಬಾಗಲಕೋಟೆಯಲ್ಲಿ ನೀನು ಮಾಡಿರುವ ಪತ್ರಿಕಾಗೋಷ್ಠಿಯನ್ನು ಗಮನಿಸಿದ್ದೇನೆ. ಬಿಜೆಪಿ ಅವಧಿಯಲ್ಲಿ ಬಿಜೆಪಿ ನಾಯಕರು ಯಾರು ಯಾರು ಎಷ್ಟೆಷ್ಟು ಲಾಭ ಪಡೆದಿದ್ದಾರೆ ಎಂಬುದು ತಿಳಿಸುವುದು ನನ್ನ ಉದ್ದೇಶವಾಗಿತ್ತು. ಅಷ್ಟಕ್ಕೂ, ದನಕಾಯುವುದು ಗೌರವದ ಕಾಯಕ. ದನಕಾಯುವವರನ್ನು ನಾನು ಗೌರವಿಸುತ್ತೇನೆ. ಮಿ. ನಿರಾಣಿ ತಾನಾಗಿಯೇ ದನಕಾಯುವವ ಎಂದು ತಿಳಿದುಕೊಂಡು, ನನ್ನ ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ. ನಾನೇ ಸ್ವತಃ ಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶವನ್ನು ಬಿಚ್ಚಿಡುತ್ತೇನೆ ಎಂದು ನಿರಾಣಿಗೆ ಸವಾಲ್ ಹಾಕಿದ್ದಾರೆ.

ಒಟ್ನಲ್ಲಿ ಯಾರು ಯಾರ ಸತ್ಯವನ್ನು ಬಿಚ್ಚಿಡುತ್ತಾರೋ ಗೊತ್ತಿಲ್ಲ. ಆದ್ರೆ, ಮುರುಗೇಶ್ ನಿರಾಣಿ ಅವರು ಯಾರು ಸೈಟ್ ಪಡೆದಿದ್ರೆ, ಎಂ.ಬಿ.ಪಾಟೀಲ್ ದಾಖಲೆಗಳನ್ನು ಬಿಡುಗಡೆ ಮಾಡಬೇಕಿದೆ. ಬೃಹತ್ ಕೈಗಾರಿಕಾ ಸಚಿವರು ಮಾಡಿದ್ದು ಕೇವಲ ಆರೋಪನಾ? ಅಥವಾ ಸತ್ಯನಾ ಅನ್ನೋದು ಸಾಬೀತಾಗಬೇಕಿದೆ.

- Advertisement -

Latest Posts

Don't Miss