Friday, September 20, 2024

Latest Posts

ವಿದೇಶದಲ್ಲಿ ಆರ್‌ಎಸ್ಎಸ್‌ ವಿರುದ್ಧ ಹೇಳಿಕೆ ಕೊಟ್ಟ ರಾಹುಲ್ ಗಾಂಧಿ

- Advertisement -

Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲ ಭಾರತದ ವಿರುದ್ಧ ಹೇಳಿಕೆ ಕೊಟ್ಟು, ಭಾರತದ ಮರ್ಯಾದೆ ತೆಗೆದೇ ಬರುತ್ತಾರೆ. ಈ ಬಾರಿ ಕೂಡ ರಾಹುಲ್ ಗಾಂಧಿ ಆರ್‌ಎಸ್‌ಎಸ್‌ ವಿರುದ್ಧ ಹೇಳಿಕೆ ನೀಡಿದ್ದು, ಮಹಿಳೆಯರೆಲ್ಲ ಮನೆಯಲ್ಲೇ ಇರಬೇಕು ಎಂಬುದು ಆರ್‌ಎಸ್‌ಎಸ್‌ ಆಶಯವೆಂದು ಹೇಳಿದ್ದಾರೆ.

ಅಮೆರಿಕದ ಟೆಕ್ಸಾಸ್ ಯುನಿವರ್ಸಿಟಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ಭಾರತದ ನಿರುದ್ಯೋಗದ ಬಗ್ಗೆ ಮಾತನಾಡಿ, ಭಾರತಕ್ಕೂ ಚೀನಾಕ್ಕೂ ಹೋಲಿಕೆ ಮಾಡಿ ಮಾತನಾಡಿದ್ದಾರೆ.

ಮಹಿಳೆಯರು ಮನೆಯಲ್ಲೇ ಇರಬೇಕು. ಅಡುಗೆ ಮಾಡಿಕೊಂಡಿರಬೇಕು. ಹೆಚ್ಚು ಮಾತನಾಡಬಾರದು ಅನ್ನೋದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಂಬೋಣ. ಆದರೆ ಹೆಣ್ಣು ಮಕ್ಕಳು ಸ್ವತಂತ್ರವಾಗಿರಬೇಕು. ಅವರಿಗೆ ಏನು ಮಾಡಲು ಇಷ್ಟವೋ, ಅದನ್ನೇ ಮಾಡಬೇಕು ಅನ್ನೋದು ಕಾಂಗ್ರೆಸ್ ಮಾತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ ಸೇರಿ ಹಲವು ದೇಶಗಳಲ್ಲಿ ಉದ್ಯೋಗ ಸಮಸ್ಯೆ ಇದೆ. ಆದರೆ ಚೀನಾ, ವಿಯೇಟ್ನಾಂನಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ಏಕೆಂದರೆ, ಅಲ್ಲಿನ ಜನ ಉತ್ಪಾದನೆಗೆ ಹೆಚ್ಚು ಬೆಲೆ ಕೊಡುತ್ತಾರೆ. ಹೊಸ ಹೊಸ ಕೈಗಾರಿಕೆಗಳಿಗೆ ಹೂಡಿಕೆ ಮಾಡುತ್ತಾರೆ. ಆದರೆ ಅಮೆರಿಕ, ಭಾರತ ಇವೆಲ್ಲವೂ ಉತ್ಪಾದನೆಯ ಕಲ್ಪನೆ ಕೈ ಬಿಟ್ಟಿದೆ. ಆ ಕಾರಣಕ್ಕಾಗಿ ಚೀನಾದಲ್ಲಿ ನಿರೋದ್ಯೋಗ ಸಮಸ್ಯೆ ಇಲ್ಲ. ಭಾರತ ಸೇರಿ ಬೇರೆ ಬೇರೆ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಇದೆ.

- Advertisement -

Latest Posts

Don't Miss