Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ“ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ“ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು ಎಂದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್‌ನವರೇ ಆಗಿರವಬಹುದು. ಬಿಜೆಪಿಯವರೇ ಆಗಿರಬಹುದು ಅಥವಾ ನಮ್ಮ ಸಂಬಂಧಿಕರೇ ಆಗಿರಬಹುದು. ಆದರೆ ಆ ಬಗ್ಗೆ ನಮಗೆ ಅನುಮಾನವಿದೆ. ಅದು ನಿಜ ಆಗುವವರೆಗೂ ಸುಮ್ಮನೆ ಹೇಳಿಕೆ ನೀಡುವುದು ಉತ್ತಮವಲ್ಲ ಎಂದು ಸತೀಶ್ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದು, ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ! ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ EDಗೆ ದೂರು ಕೊಟ್ಟ ಕಾಂಗ್ರೆಸ್ ನಾಯಕರು ಯಾರು? ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

ಸಚಿವ ಸತೀಶ್ ಜಾರಕಿಹ“ಳಿ ಅವರು ತಮ್ಮ ಬೆನ್ನಿಗೆ ಚೂರಿ ಹಾಕುತ್ತಿರುವ ಅವರದೇ ಪಕ್ಷದ ಹಿತಶತೃಗಳ ಹೆಸರುಗಳನ್ನ ಬಹಿರಂಗ ಮಾಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

About The Author