Sunday, December 22, 2024

Latest Posts

Sandalwood News: ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

- Advertisement -

Sandalwood News: ಕೆಲ ದಿನಗಳಿಂದ ನಟಿ ರಮ್ಯಾ ಮದುವೆ ಫಿಕ್ಸ್ ಆಯ್ತು. ಉದ್ಯಮಿಯ ಜೊತೆ ರಮ್ಯಾ ಸಪ್ತಪದಿ ತುಳಿಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ನಟಿ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ರಮ್ಯಾ ಇದೆಲ್ಲ ಸುಳ್ಳು ಸುದ್ದಿ. ಯಾವ ಉದ್ಯಮಿಯ ಜೊತೆಗೂ ನನ್ನ ಮದುವೆ ಫಿಕ್ಸ್ ಆಗಲಿಲ್ಲ. ಎಂಗೇಜ್‌ಮೆಂಟ್ ಕೂಡ ಆಗಲಿಲ್ಲ ಎಂದು ರಮ್ಯಾ ಹೇಳಿದ್ದಾರೆ. ರಮ್ಯಾ ಮದುವೆಯಾಗುತ್ತಿದ್ದಾರೆ ಎಂದು ಹಲವರು, ಹಲವು ರೀತಿಯಲ್ಲಿ ವರ್ಷಗಳಿಂದ ಗಾಸಿಪ್ ಹಬ್ಬಿಸುತ್ತ ಬಂದಿದ್ದಾರೆ. ಅದೇ ರೀತಿ ಈ ಬಾರಿಯೂ ಕೂಡ ರಮ್ಯಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ರಮ್ಯಾ ಅವರೇ ಹೇಳಿದ್ದಾರೆ.

ಮೀಡಿಯಾದವರು ನನಗೆ ಲೆಕ್ಕಕ್ಕೆ ಸಿಗದಷ್ಟು ಬಾರಿ ಮದುವೆ ಮಾಡಿಸಿದ್ದಾರೆ. ಆದರೆ ನಾನು ಮದುವೆಯಾಗಬೇಕು ಎಂದು ನಿರ್ಧರಿಸಿದಾಗ,  ಆ ಬಗ್ಗೆ ನೀವು ಸ್ವತಃ ನನ್ನ ಬಾಯಿಯಿಂದಲೇ ಆ ಮಾತನ್ನು ಕೇಳುತ್ತೀರಿ. ಸ್ಪಷ್ಟನೆ ಇಲ್ಲದವರ ಕಡೆಯಿಂದ ಬರುವ ಗಾಳಿ ಸುದ್ದಿಯನ್ನು ದಯವಿಟ್ಟು ನಂಬಬೇಡಿ ಎಂದು ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ರಂಗದಿಂದ ದೂರವಾದ ಬಳಿಕ, ಕಾಂಗ್ರೆಸ್ ಪಕ್ಷದಲ್ಲಿ ರಮ್ಯಾ ಸಕ್ರೀಯರಾಗಿದ್ದರು. ಅಲ್ಲದೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದಾಗಲೆಲ್ಲ ಟ್ರೋಲ್ ಆಗುತ್ತಿದ್ದರು. ಆದರೆ ಆಕೆ ರಾಜಕೀಯವನ್ನು ಬಿಟ್ಟು ಪುನಃ ಚಿತ್ರರಂಗಕ್ಕೆ ಬಂದಾಗ, ಕನ್ನಡಿಗರು ಆಕೆಯನ್ನು ಪ್ರೀತಿಯಿಂದಲೇ ಬರ ಮಾಡಿಕೊಂಡಿದ್ದರು. ಆದರೆ ಒಪ್ಪಿಕೊಂಡ ಸಿನಿಮಾಗಳನ್ನು ರಮ್ಯಾ ಕಾರಣಾಂತರಗಳಿಂದ ಕೈ ಬಿಟ್ಟಿದ್ದರು. ಇದೀಗ, ಸಿನಿಮಾ, ರಾಜಕೀಯ ಎಲ್ಲದರಿಂದ ದೂರವಾಗಿ, ತಮ್ಮ ಜೀವನವನ್ನು ರಮ್ಯಾ ಎಂಜಾಯ್ ಮಾಡುತ್ತಿದ್ದಾರೆ.

- Advertisement -

Latest Posts

Don't Miss