Wednesday, August 6, 2025

Latest Posts

Crime:ಅದು 6 ವರ್ಷಗಳ ಪ್ರೀತಿ! ವಾಸುಕಿ ಸಾ*ವಿಗೆ ಬಿಗ್​ಟ್ವಿಸ್ಟ್!

- Advertisement -

ಈ ಯುವತಿ ಹೆಸರು ವಾಸುಕಿ. ಹೆಸರಿಗೆ ತಕ್ಕಂತೆ ಚೆಲುವೆ, ಸುಂದರಿ ಕೂಡ ಹೌದು. ಜಸ್ಟ್ 25 ವರ್ಷ ಅಷ್ಟೇ. ಜೀವನ ಕಾಲು ಭಾಗ ಇನ್ನೂ ಪೂರೈಸಿಲ್ಲ. ಆದ್ರೆ, ಪ್ರೀತಿ ಅನ್ನೋ ಮೋಹದ ಬಲೆಗೆ ಬಿದ್ದಿದ್ದ ವಾಸುಕಿ, ಇಹಲೋಕ ತ್ಯಜಿಸಿದ್ದಾರೆ. ಈಕೆಯ ಲವ್ ಸ್ಟೋರಿಯೇ ನಿಜಕ್ಕೂ ರೋಚಕ. ಮಾಜಿ ಕಾರ್ಪೋರೇಟರ್ ಮಗ ವಾಸುಕಿಯನ್ನು ಬಲಿ ಪಡೆದಿದ್ದಾನೆ.. ಹಾಗಾದ್ರೆ, ಆತ ಯಾರು? ಇಬ್ಬರ ಪ್ರೀತಿಯಲ್ಲಿ ಹುಳಿ ಹಿಂಡಿದ್ಯಾರು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..

ಇದು 6 ವರ್ಷಗಳ ಹಿಂದಿನ ಸ್ಟೋರಿ. ವಾಸುಕಿ ಬೆಂಗಳೂರಿನಲ್ಲಿ ಲಾ ಓದುತ್ತಿದ್ಳು. ಇದೇ ಸಮಯದಲ್ಲಿ ಶ್ರವಂತ್ ಅನ್ನೋ ಹುಡುಗನ ಪರಿಚಯ ಆಗ್ತಾನೆ. ಆ ಪರಿಚಯ ಪ್ರೀತಿಯಾಗಿ ತಿರುಗಿತ್ತು. ಇಬ್ಬರು ಪ್ರೇಮದ ಅಲೆಯಲ್ಲಿ ಬೀದಿ ಬೀದಿ ಸುತ್ತಾಡಿದ್ರು. ಆದ್ರೆ ಈ ಟೈಮ್​ನಲ್ಲಿ ಈ ವಾಸುಕಿಗೆ ಆರ್.​ಟಿ ನಗರದ ಮಾಜಿ ಕಾರ್ಪೋರೇಟರ್ ಮಗ ಶ್ರವಣ್​ ಪರಿಚಯವಾಗುತ್ತೆ. ವಾಸುಕಿ ನೋಡೋದಕ್ಕೆ ಸುಂದರಿ. ಮನೆ ಕಡೆ ಶ್ರೀಮಂತಿಕೆಯೂ ಇತ್ತು. ಅಪ್ಪ-ಅಮ್ಮಗೆ ಒಬ್ಬಳೆ ಪುತ್ರಿ ವಾಸುಕಿ. ಇದನ್ನು ತಿಳಿದುಕೊಂಡ ಮಾಜಿ ಕಾರ್ಪೋರೇಟರ್ ಮಗ ಶ್ರವಣ್, ವಾಸುಕಿ- ಶ್ರವಂತ್ ಪ್ರೀತಿಗೆ ಹುಳಿ ಹಿಂಡಿದ್ದ. ಇದಾದ ಮೇಲೆ ವಾಸುಕಿ ಜೊತೆ ಶ್ರವಣ್ ಪ್ರೀತಿ ಬೆಳೆಸಿದ್ದ. ಇಬ್ಬರು ಬರೋಬ್ಬರಿ ಆರು ವರ್ಷಗಳ ಕಾಲ ಪ್ರೀತಿ ಮಾಡಿದ್ರು. ಆದ್ರೀಗ ಈ ಆರು ವರ್ಷದ ಪ್ರೀತಿಯೇ ವಾಸುಕಿಯನ್ನ ಬಲಿ ಪಡೆದಿರುವ ಆರೋಪ ಕೇಳಿ ಬಂದಿದೆ.

ಶ್ರವಣ್ ವಾಸುಕಿ ಜೊತೆ ಎಲ್ಲಾ ಕಡೆ ಸುತ್ತಾಡಿ ಎಂಜಾಯ್​ ಮಾಡಿದ್ದಾನೆ. 6 ವರ್ಷ ಪ್ರೀತಿಸಿದ ನಂತರ ವಾಸುಕಿ ಮದುವೆಯಾಗುವಂತೆ ಶ್ರವಣ್​ಗೆ ಪಟ್ಟು ಹಿಡಿದಿದ್ದಾಳೆ. ಆದ್ರೆ, ಮದುವೆ ವಿಚಾರ ಬಂದ್ರೆ ಸಾಕು, ಶ್ರವಣ್ ಮಾರುದ್ಧ ಹೋಗ್ತಿದ್ದನಂತೆ. ಮದುವೆಯಾಗದೇ ಸಾತಾಯಿಸಿದ್ದ. ಕೊನೆಗೆ ವಾಸುಕಿ, ಈ ಶ್ರವಣ್ ಸಹವಾಸ ಬೇಡವೆಂದು ದೂರ ಆಗಿದ್ಳು.

ಲವ್ ಬ್ರೇಕ್​ಆಪ್ ಆಗಿರೋ ವಿಚಾರವನ್ನು ವಾಸುಕಿ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಹೀಗಾಗಿ, ಬೇರೆ ಹುಡುಗನೊಂದಿಗೆ ಮದುವೆಗೆ ತಯಾರಿ ಕೂಡ ನಡೆದಿತ್ತು. ಆದ್ರೆ, ವಾಸುಕಿ ಮೊದಲ ಪ್ರಿಯಕರ ಶ್ರವಂತ್ ಜೊತೆ ಮದುವೆಯಾಗೋದಾಗಿ ಪೋಷಕರಿಗೆ ತಿಳಿಸಿದ್ವು. ಅದಕ್ಕೆ ಪೋಷಕರು ಕೂಡ ಒಪ್ಪಿಗೆ ಸೂಚಿಸಿದ್ರು. ಅಲ್ಲದೇ, ವಾಸುಕಿ ಹಾಗೂ ಶ್ರವಂತ್​ಗೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಮದುವೆಯೂ ಆಗಿರಬೇಕಿತ್ತು. ಆದ್ರೆ, ಆಗಸ್ಟ್ 22ರಂದು ವಾಸುಕಿ ಹೆಣವಾಗಿ ಬಿದ್ದಿದ್ಳು. ಮನೆಯವರಿಗೆಲ್ಲ ಗಾಬರಿ, ಏನಾಯ್ತು? ಯಾಕೆ ಸೂಸೈಡ್ ಮಾಡ್ಕೊಂಡಳು ಅನ್ನೊದೇ ಗೊತ್ತಿರಲಿಲ್ಲ. ಕೊನೆಗೆ ವಾಸುಕಿ ಮೃತದೇಹವನ್ನು ಅಂತ್ಯ ಸಂಸ್ಕಾರ ಕೂಡ ಮಾಡಿದ್ರು. ಆದ್ರೆ ಅಂತ್ಯ ಸಂಸ್ಕಾರದ ದಿನ ಗೊತ್ತಾದ ಅದೊಂದು ಸತ್ಯವೇ ಇಡೀ ಕುಟುಂಬಕ್ಕೆ ಶಾಕ್ ಆಗಿತ್ತು.

ಮಗಳು ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಅನ್ನೋದೇ ಪೋಷಕರ ಯಕ್ಷ ಪ್ರಶ್ನೆಯಾಗಿತ್ತು. ಆದ್ರೆ, ವಾಸುಕಿಯ ಸ್ನೇಹಿತರ ಮನೆಗೆ ಬಂಗಾದ ಆತ್ಮಹತ್ಯೆಯ ಕಾರಣ ಬಹಿರಂಗವಾಗಿದೆ. ಮದುವೆ ಫಿಕ್ಸ್ ಆದನಂತರವೂ ಆರ್.​ಟಿ ನಗರದ ಮಾಜಿ ಕಾರ್ಪೋರೇಟರ್ ಮಗ ಶ್ರವಣ್​, ವಾಸುಕಿ ಕಿರುಕುಳ ಕೊಡ್ತಿದ್ದ. ಮೊಬೈಲ್​ಗೆ ಆಶ್ಲೀಲ ಮೆಸೇಜ್ ಕಳುಹಿಸಿದ್ದು ಪತ್ತೆಯಾಗಿತ್ತು. ಹೀಗಾಗಿ, ಪುತ್ರಿ ವಾಸುಕಿ ಸಾವಿಗೆ ಶ್ರವಣ್ ಕಾರಣ ಅಂತ ವಾಸುಕಿ ತಾಯಿ ವೆಂಕಟಲಕ್ಷ್ಮೀ ಆರೋಪಿಸಿದ್ದಾರೆ.

ವಾಸುಕಿ ಅವರ ತಾಯಿ ಬೆಂಗಳೂರಿನ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶ್ರವಣ್ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿತ್ತು. ಆದ್ರೆ, ಪೊಲೀಸರು ಒತ್ತಡಕ್ಕೆ ಮಣಿದು, ಶ್ರವಣ್​ನನ್ನು ಬಂಧಿಸೋದು ಇರಲಿ, ವಿಚಾರಣೆಗೂ ಕರೆದಿಲ್ಲ. ಆರೋಪಿಯ ತಂದೆ ಪ್ರಭಾವಿಯಾಗಿರೋದ್ರಿಂದ ಪೊಲೀಸ್ರು ಸರಿಯಾಗಿ ತನಿಖೆ ಮಾಡ್ತಿಲ್ಲ ಅಂತ ನೊಂದ ವಾಸುಕಿ ತಾಯಿ ​ಅಳಲು ತೋಡಿಕೊಂಡಿದ್ದಾರೆ. ಒಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಾಸುಕಿ ಆತ್ಮ ಹಾಗೂ ನೊಂದಿರುವ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ.

- Advertisement -

Latest Posts

Don't Miss